ತುಂಬೆ :ಗ್ರಾ ಪಂ ನಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ
ಬಂಟ್ವಾಳ :ತುಂಬೆ ಗ್ರಾಮ ಪಂಚಾಯತ್ ಮತ್ತು ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ ಇವುಗಳ ಜಂಟಿ ಸಹಯೋಗದಲ್ಲಿ “ಅಂಚೆ ಜನ ಸಂಪರ್ಕ ಅಭಿಯಾನ”ಕಾರ್ಯಕ್ರಮವು ತುಂಬೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು.

ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಸಾಲಿಯಾನ್ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿ, ಅಂಚೆ ಇಲಾಖೆಯಿಂದ ದೊರಕುವ ಪ್ರಮುಖ ಸೇವೆಗಳಾದ ಆಧಾರ್ ಕಾರ್ಡ್ ಮತ್ತು ಆರೋಗ್ಯ ವಿಮೆ ಜನಸಾಮಾನ್ಯರಿಗೆ ಅಗತ್ಯವಿದ್ದು, ಗ್ರಾಮಸ್ಥರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಕೇಶವ ಸಭಾಧ್ಯಕ್ಚತೆ ವಹಿಸಿದ್ದರು.
ಗ್ರಾ.ಪಂ.ಸದಸ್ಯ ಪ್ರವೀಣ್ ಬಿ ತುಂಬೆ, ಅಂಚೆ ಇಲಾಖೆ ಮಾರ್ಕೆಟಿಂಗ್ ಎಕ್ಸಕ್ಯೂಟಿವ್ ಗಣೇಶ್ ಶೆಟ್ಟಿ, ಅಂಚೆ ಇಲಾಖೆಯ ಕಾರ್ಯನಿರ್ವಾಹಕರಾದ ಮಹೇಶ್ ನಾಯಕ್, ತುಂಬೆ ಗ್ರಾಮ ಪಂಚಾಯತ್ ಲೆಕ್ಕ ಸಹಾಯಕರಾದ ಚಂದ್ರಕಲಾ ಜಿ, ಅಂಚೆ ಇಲಾಖಾ ಸಿಬ್ಬಂದಿಗಳಾದ ಹರೀಶ್, ಶಿವಪ್ರಸಾದ್, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಅಂಚೆ ಇಲಾಖಾ ಸಿಬ್ಬಂದಿ ರೇಖಾ ಸ್ವಾಗತಿಸಿ ವಂದಿಸಿದರು.



