Published On: Tue, Sep 16th, 2025

ಶ್ರೀ ಕ್ಷೇ. ಧ. ಗ್ರಾ. ಯೋಜನೆ ಗೊಳ್ತಮಜಲು “ಬಿ” ಒಕ್ಕೂಟದ ವತಿಯಿಂದ  ನೆಟ್ಲ ದೇವಸ್ಥಾನದಲ್ಲಿ ಸಿಯಾಳಭಿಷೇಕ ಹಾಗೂ ಒಕ್ಕೂಟದ ವಾರ್ಷಿಕೋತ್ಸವ

ಬಂಟ್ವಾಳ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ವಿಟ್ಲ ಇದರ ಕಲ್ಲಡ್ಕ ವಲಯದ ಗೊಳ್ತಮಜಲು  “ಬಿ” ಒಕ್ಕೂಟದ 20 ನೇ  ವಾರ್ಷಿಕೋತ್ಸವ ನೆಟ್ಲದ ನಿಟಿಲಾಕ್ಷ ಶ್ರೀ ಸದಾಶಿವ ದೇವಸ್ಥಾನದ  ಸಭಾಭವನದಲ್ಲಿ ನಡೆಯಿತು.


ಬೆಳಿಗ್ಗೆ ಒಕ್ಕೂಟದ ವತಿಯಿಂದ  ಗ್ರಾಮ ಸುಭಿಕ್ಷೆ ಹಾಗೂ  ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆಯುವ ಅಪವಾದಗಳಿಂದ ಮುಕ್ತವಾಗುವಂತೆ ಪ್ರಾರ್ಥಿಸಿ ಶ್ರೀ ನಿಟಿಲಾಕ್ಷನಿಗೆ ಸುಮಾರು 250  ಸೀಯಾಳಾಭಿಷೇಕ ನೆರವೇರಿಸಲಾಯಿತು.

ಬಳಿಕ ಒಕ್ಕೂಟದ ಅಧ್ಯಕ್ಷರಾದ ಸೀತಾರಾಮ್  ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
  ಜಿಲ್ಲಾ  ಧಾರ್ಮಿಕ ಪರಿಷತ್ ಸದಸ್ಯ  ಜಗನ್ನಾಥ ಚೌಟ ಬದಿಗುಡ್ಡೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಸ್ತುಬದ್ದ ವ್ಯವಸ್ಥೆಯ ಮೂಲಕ ಮಹಿಳಾ ಸಬಲೀಕರಣದ  ಕಾರ್ಯಕ್ರಮಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಆಗಿದೆ. ಪ್ರತಿ ಕ್ಷೇತ್ರದಲ್ಲೂ ಸಮಾಜಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ  ಸುಭಿಕ್ಷ ಸಮಾಜ ನಿರ್ಮಾಣದಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆಯವರ  ದೂರದೃಷ್ಟಿಯ ಯೋಚನೆಗಳು ಬಹಳ ಪ್ರಾಮುಖ್ಯತೆ ಪಡೆದಿದೆ ಎಂದರು.


ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಯೋಜನೆಯ ನಡೆದು ಬಂದ ದಾರಿ, ಶ್ರೀ ಕ್ಷೇತ್ರದಿಂದ ಸಮಾಜಕ್ಕೆ ಕೊಟ್ಟಿರುವ ಕೊಡುಗೆಗಳು, ಕ್ಷೇತ್ರದ ವತಿಯಿಂದ ನಡೆಯುವ ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು.ಕಳೆದ 20 ವರ್ಷಗಳಿಂದ ಒಕ್ಕೂಟದ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದವರನ್ನು ಗುರುತಿಸಿ ಗೌರವಿಸಲಾಯಿತಲ್ಲದೆನವ ಜೀವನ ಸಮಿತಿಯ ಸದಸ್ಯರನ್ನು ಅಭಿನಂದಿಸಲಾಯಿತು.


ಕಾರ್ಯಕ್ರಮದಲ್ಲಿ ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷ ನವೀನ್ ಚಂದ್ರ, ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ,ನಿವೃತ್ತ ಸೈನಿಕ  ದಿನೇಶ್,ಪ್ರಗತಿಪರ ಕೃಷಿಕರಾದ ಮಹೇಶ್ ಶೆಟ್ಟಿ, ನೆಟ್ಲ ಶಾಲಾ ಶಿಕ್ಷಕ ಪ್ರವೀಣ್,ಬೋಳಂತೂರು ಒಕ್ಕೂಟ ಅಧ್ಯಕ್ಷ ಸೀತಾ, ಗೊಳ್ತಮಜಲು ‘ಎ’ ಒಕ್ಕೂಟ ಅಧ್ಯಕ್ಷೆ ಪ್ರೇಮ, ಮಾಮೇಶ್ವರ ಒಕ್ಕೂಟ ಅಧ್ಯಕ್ಷ  ಹರೀಶ್ ವಿ, ವೀರಕಂಬ ಒಕ್ಕೂಟ ಅಧ್ಯಕ್ಷ ಶಾಂಭವಿ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.


ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕ ಶುಖರಾಜ್ ಸ್ವಾಗತಿಸಿ,ಸುಕನ್ಯಾ ಯಸ್ . ಕ ವರದಿ ವಾಚಿಸಿದರು,
ಶಿಕ್ಷಕಿ ಅರುಣ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸದಸ್ಯರಿಂದ ವಿವಿಧ ಮನೋರಂಜನ ಕಾರ್ಯಕ್ರಮ ಜರಗಿತು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter