ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದಿಂದ ತುಂಬೆ ಶಾರದಾಂಬ ಸಮುದಾಯ ಭವನಕ್ಕೆ 5 ಲಕ್ಷ ಸಹಾಯಧನ ಮಂಜುರಾತಿ ಪತ್ರ ಹಸ್ತಾಂತರ
ಬಂಟ್ವಾಳ: ತಾಲೂಕಿನ ತುಂಬೆ ಗ್ರಾಮದ ಶ್ರೀ ಶಾರದಾಂಬ ಸಮುದಾಯ ಭವನದ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 5 ಲಕ್ಷ ರೂ. ಅನುದಾನದ ಮಂಜೂರಾತಿ ಪತ್ರವನ್ನು ಶ್ರೀ ಶಾರದಾ ರಜತ ಮಹೋತ್ಸವ ಸಮಿತಿಗೆ ಹಸ್ತಾಂತರಿಸಿದರು.

ಬಂಟ್ವಾಳ ತಾಲೂಕಿನ ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರಾದ ಮಾಧವ ವಲವೂರು ಅವರು ಸಮಿತಿಯ ಅಧ್ಯಕ್ಷರಾದ ರಾಘವ ಬಂಗೇರ ಪೆರ್ಲ ಬೈಲು ಅವರಿಗೆ ಅನುದಾನದ ಮಂಜೂರಾತಿ ಪತ್ರ ಹಸ್ತಾಂತರಗೈದರು.
ಈ ಸಂದರ್ಭ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ಕೋಟ್ಯಾನ್ ಕುಂಬ್ದೆಳು, ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷರಾದ ಗಣೇಶ್ ಸುವರ್ಣ ತುಂಬೆ, ಪ್ರಧಾನ ಕಾರ್ಯದರ್ಶಿ ದಿವಾಕರ ಫೇರ್ಲ ಬೈಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಬೆ ವಲಯ ಮೇಲ್ವಿಚಾರಕಿ ಮಮತಾ, ಸೇವಾ ಪ್ರತಿನಿಧಿಗಳಾದ ಅನಿತ, ಚಿತ್ರಾಕ್ಷಿ, ಒಕ್ಕೂಟದ ಜೊತೆ ಕಾರ್ಯದರ್ಶಿ ಸೌಮ್ಯ, ಒಕ್ಕೂಟದ ಸದಸ್ಯರು, ಶಾರದಾ ರಜತ ಮಹೋತ್ಸವ ಮತ್ತು ಸೇವಾ ಪ್ರತಿಷ್ಠಾನ ಟ್ರಸ್ಟಿಯ ಸದಸ್ಯರು,ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು