ಸೆ.22 -ಅ.1 ವರೆಗೆ ಪೊಳಲಿಯಲ್ಲಿ ಶರನ್ನವರಾತ್ರಿ ಉತ್ಸವ
ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಶರನ್ನವರಾತ್ರಿಯು ಸೆ. 22 ಅ.1 ವರೆಗೆ ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ.
ನವರಾತ್ರಿಯಪ್ರತೀ ದಿನ ಮಧ್ಯಾಹ್ನ ಭಕ್ತಾದಿಗಳಿಂದ ಹರಕೆಯ ಚಂಡಿಕಾ ಹೋಮ ಅ.01ರಂದು ಮಹಾನವಮಿ ಪ್ರಯುಕ್ತ ದೇವಳದ ವತಿಯಂದ ಚಂಡಿಕಾಹೋಮವೂ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ನವರಾತ್ರಿ ಪ್ರಯುಕ್ತ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ,ಅ. ೧ ರಂದು ನವರಾತ್ರಿಯ ವೇಷಗಳ ಸಂಭ್ರಮ ನಡೆಯಲಿದೆ.ರಾಜರಾಜೇಶ್ವರೀ ಸನ್ನಿಧಿಯಲ್ಲಿ ನವರಾತ್ರಿ ದಿನದಂದು ರಾತ್ರಿ 7 ಗಂಟೆಗೆ ನಿತ್ಯ ಪೂಜೆ ಹಾಗೂ ರಾತ್ರಿ 8 ಗಂಟೆಗೆ ನವರಾತ್ರಿ ಪೂಜೆ ಜರಗಲಿದೆಎಂದು ಪ್ರಕಟಣೆ ತಿಳಿಸಿದೆ.