Published On: Thu, Jun 14th, 2018

ಪೆರ್ನಾಳ್ ಕಳೆಗುಂದುವ ಮನೆಗೆ ಬೇಕಿದೆ ದಾನಿಗಳ ಸಹಾಯಹಸ್ತ!

vlcsnap-2018-06-14-16h39m26s158

ಉಳ್ಳಾಲ: ಆ ಮನೆಯಲ್ಲಿ ಪೆರ್ನಾಲ್ ಹಬ್ಬ ಕಳೆಗುಂದಿದೆ. ಗಾಳಿ, ಮಳೆ, ಸಿಡಿಲಿಗೆ ದಂಪತಿ ಮಕ್ಕಳನ್ನು ರಕ್ಷಿಸಿ ಮುರುಕು ಮನೆಯಲ್ಲೇ ರಾತ್ರಿ ಹಗಲು ಬಾಳುವಂತಹ ದುಸ್ಥಿತಿ. ಪ್ರತಿ ಮನೆಯಲ್ಲಿ ಹಬ್ಬದ ತಯಾರಿಯ ಪೂರ್ವಭಾವಿಯಾಗಿ ಹೊಸ ಬಟ್ಟೆಬರೆಗಳನ್ನು ಖರೀದಿಸುವ ಧಾವಂತದಲ್ಲಿ ಇದ್ದರೆ, ಇಲ್ಲಿ ಮನೆಮಂದಿ  ಗಾಳಿ-ಮಳೆ ನಡುವೆ ಬದುಕುವುದು ಹೇಗೆ? ನಾಳೆಯ ಊಟಕ್ಕೆ ಏನು ಮಾಡುವುದು ಅನ್ನುವ ಚಿಂತೆಯಲ್ಲಿ ಮುಳುಗಿದ್ದಾರೆ.

ಬೆಳ್ಮ ಕನಕೂರು ಪದವು ನಿವಾಸಿ ಶೇಖ್ ಸಂಶುದ್ದೀನ್  ಕುಟುಂಬ ಇದೀಗ ಆರ್ಥಿಕವಾಗಿ ಕಂಗೆಟ್ಟು ಮುರುಕಲು ಮನೆಯಲ್ಲಿ ಇಬ್ಬರು ಎಳೆಯ ಹರೆಯದ ಮಕ್ಕಳು ಮತ್ತು ಪತ್ನಿ ಜತೆಗೆ ವಾಸಿಸುವ ಅನಿವಾರ್ಯತೆ ಎದುರಾಗಿದೆ. ಕೂಲಿ ಕೆಲಸ ಮಾಡಿಕೊಂಡು  ಜೀವನ ಸಾಗಿಸುತ್ತಿದ್ದ ಸಂಶುದ್ದೀನ್ ಬಂದ ಆದಾಯದಲ್ಲೇ  ಕನಕೂರುಪದವು ತಾನು ನೆಲೆಸಿದ್ದ ಸರಕಾರಿ ಜಾಗದಲ್ಲೇ  ಮನೆಯನ್ನು ಕಟ್ಟಲು ಆರಂಭಿಸಿದ್ದರು.  ಆದರೆ ಮನೆಯ ಗೋಡೆಯ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲೇ  ಕೆಲಸಕ್ಕೆ ಹೋದಲ್ಲಿ ಸಂಶುದ್ದೀನ್ ಕಟ್ಟಡದ ಮೇಲಿನಿಂದ ಕೆಳಗೆ ಬಿದ್ದು  ಸೊಂಟದ ಭಾಗಕ್ಕೆ ತೀವ್ರವಾಗಿ ಗಾಯಗೊಂಡಿದ್ದರು. ಆನಂತರ ಉಂಟಾದ ಡಿಸ್ಕ್  ಸಮಸ್ಯೆಯಿಂದಾಗಿ ಅತ್ತ ಕೆಲಸಕ್ಕೆ ಹೋಗಲಾಗದೆ, ಇತ್ತ ಮನೆಮಂದಿಯನ್ನು ಸಾಕಲು ಅಸಾಧ್ಯವಾಗಿ ಮನೆ ಕೆಲಸವೂ ಅರ್ಧಕ್ಕೇ ನಿಂತಿತು.

IMG-20180610-WA0079

ಮೇಲ್ಛಾವಣಿ ಇಲ್ಲದ ಮನೆಯ ಒಂದು ಕೋಣೆಗೆ ಹಾಸಿದ ಶೀಟಿನಲ್ಲೇ ನಾಲ್ವರ ಕುಟುಂಬ  ಜೀವನ  ನಡೆಸಲು ಆರಂಭಿಸಿತು.  ಕೆಲ ದಿನ ಮಕ್ಕಳಿಗೆ ಊಟ ಕೊಟ್ಟು ತಮಗೆ ತುತ್ತೂ ಸಿಗದೆ ಹಾಗೆಯೇ ಊಟವಿಲ್ಲದೆ ರಾತ್ರಿಗಳನ್ನೂ ದಂಪತಿ ಕಳೆದಿದೆ. ಆದರೂ ಧೃತಿಗೆಡದ  ಸಂಶುದ್ದೀನ್ ಸಣ್ಣಪುಟ್ಟ ಕೆಲಸಗಳನ್ನು ನಿರ್ವಹಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಜೀವನ ನಿರ್ವಹಣೆಯನ್ನು ಮುರುಕಲು ಮನೆಯಲ್ಲೇ ನಡೆಸುತ್ತಿದ್ದರು. ಗಾಳಿ, ಮಳೆ, ಸಿಡಿಲಿಗೆ ಮಕ್ಕಳು ಹೆದರಿದರೂ, ಸಾಮಧಾನಿಸಿ ಮಲಗಿಸಿ ದಂಪತಿ ನಿದ್ದೆಗಟ್ಟ ರಾತ್ರಿಗಳೂ ಇವೆ.

ಹೆಲ್ಪ್ ಇಂಡಿಯಾ ಫೌಂಡೇಶನ್‍ನಿಂದ ಸಹಾಯಹಸ್ತ: ಇತ್ತೀಚೆಗೆ ರಂಝಾನ್ ಕಿಟ್ ವಿತರಿಸುತ್ತಿದ್ದ  ಹೆಲ್ಪ್ ಇಂಡಿಯಾ ಫೌಂಡೇಶನ್ ಗಮನಕ್ಕೆ ಶೇಖ್ ಸಂಶುದ್ದೀನ್ ಕುಟುಂಬ ಬಂದಿದೆ. ಕುಟುಂಬ ಬದುಕುತ್ತಿರುವ ವ್ಯವಸ್ಥೆಯನ್ನು ನೋಡಿ ಸಂಸ್ಥೆಯ ಸದಸ್ಯರೇ ತಾವು ಒಟ್ಟುಗೂಡಿಸಿದ ಅಲ್ಪ ಮೊತ್ತದಲ್ಲಿ ಮನೆಯ ಬಹುತೇಕ ಕೋಣೆಗಳಿಗೆ ತಾತ್ಕಾಲಿಕ ಶೀಟುಗಳನ್ನು ಹಾಕಿ ಬಾಳುವಂತಹ ವ್ಯವಸ್ಥೆ ಮಾಡಿಕೊಟ್ಟರು. ಆದರೆ ಶೌಚಾಲಯವಿಲ್ಲದೇ ಮನೆಯ ಮೂರು ಹೆಣ್ಮಕ್ಕಳು ಸಮೀಪದ ಮನೆಗೆ ಹೋಗುವ ಅನಿವಾರ್ಯತೆ ಇದೆ. ಇಂತಹ ದುಸ್ಥಿತಿಯಲ್ಲಿರುವ ಕುಟುಂಬಕ್ಕೆ ಬಾಳುವುದೇ ಒಂದು ಸವಾಲಾಗಿದ್ದರೆ,  ರಂಝಾನ್  ಶಾಪಿಂಗ್ ನಡೆಸುವವರು ಸ್ವಲ್ಪ ಮೊತ್ತವನ್ನಾದರೂ ಈ ಕುಟುಂಬಕ್ಕೆ ದಾನ ಮಾಡಿದರೆ, ಮುಂದಿನ ಹಬ್ಬವಲ್ಲ, ಬದಲಾಗಿ ಜೀವನವಿಡೀ ಸುಖದಿಂದ ಬಾಳಬಹುದು ಅನ್ನುವ ಅಭಿಪ್ರಾಯ ಫೌಂಡೇಷನ್ ನ ಸದಸ್ಯರದ್ದಾಗಿದೆ.

ಸಹಾಯ ಮಾಡಲು ಇಚ್ಛಿಸುವವರು

ಹೆಸರು: ಆಯಿಷತ್ ಖೈರುನ್ನೀಸಾ

ಯೂನಿಯನ್ ಬ್ಯಾಂಕ್

ದೇರಳಕಟ್ಟೆ ಬ್ರಾಂಚ್

ಅಕೌಂಟ್ ಸಂಖ್ಯೆ: 574702010005022

ಐಎಫ್‍ಎಸ್‍ಸಿ ಕೋಡ್ : ಯುಬಿಐಎನ್‍ಒ 557471

IMG-20180610-WA0080

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter