“ಸಮಗ್ರ ಶಾರದಾ” ಫೆಸ್ಟ್: ಸಮಗ್ರ ಬಹುಮಾನ ಮುಡಿಗೇರಿಸಿದ ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜ್
ಬಂಟ್ಚಾಳ: ಮಂಗಳೂರಿನ ಶಾರದಾ ಕಾಲೇಜಿನಲ್ಲಿ ನಡೆದ “ಸಮಗ್ರ ಶಾರದಾ” ಫೆಸ್ಟ್ ನಲ್ಲಿ ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯವು ಮೊದಲ ಸ್ಥಾನ ಪಡೆದು,ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಭಾಗವಹಿಸಿದ ಒಟ್ಟು ೧೫ ಕಾಲೇಜುಗಳಲ್ಲಿ ಒಟ್ಟು ೨೧ ವಿದ್ಯಾರ್ಥಿಗಳು ೧೦ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ೩ ಪ್ರಥಮ – ಮೆಗಾ ಮೈಂಡ್ ಈವೆಂಟ್ ನಲ್ಲಿ ಪ್ರತೀಕ್ಷಾ, ಚೈತ್ರಾ, ವಿಸ್ಮಿತಾ, ಪುನೀತಾ, ರಕ್ಷಿತಾ, ಜಿತೇಶ್ ಪ್ರಥಮ. ವಿಡಿಯೋಗ್ರಾಫಿಯಲ್ಲಿ ವಿಘ್ನೇಶ್ ಪ್ರಥಮ, ಇಂಟರಾಕ್ಟಿವ್ ಸ್ಟೋರಿ ಟೆಲಿಂಗ್ ಲಿ ಮೋನಿಕಾ ಪ್ರಥಮಹಾಗೂ ೨ ದ್ವಿತೀಯ- ಆನಿಮೇಷನ್ ಕ್ವಿಜ್ ಲಿ ಅಕ್ಷಯ್, ಭವಿತ್ ದ್ವಿತೀಯ, ಕವನ ರಚನೆಯಲ್ಲಿ ಮನ್ವಿತಾ ದ್ವಿತೀಯ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ. ಹೀಗೆ ಒಟ್ಟು ೫ ಬಹುಮಾನಗಳನ್ನು ಪಡೆಯಿತು.
ಸಮಗ್ರ ಬಹುಮಾನ ಪಡೆದ ಹಿನ್ನಲೆಯಲ್ಲಿ ಶ್ರೀರಾಮ ಪದವಿ ಕಾಲೇಜಿನಲ್ಲಿ ವಿಜಯೋತ್ಸವವನ್ನು ಆಚರಿಸಲಾಯಿತು.