ನಾಣ್ಯ :ಕುಲಾಲ ಸುಧಾರಕ ಸಂಘದ ವಾರ್ಷಿಕೋತ್ಸವ,ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪ್ರೋತ್ಸಾಹಧನ ವಿತರಣೆ
ಬಂಟ್ವಾಳ: ಕುಲಾಲ ಸುಧಾರಕ ಸಂಘ (ರಿ) ನಾಣ್ಯ ಫರಂಗಿಪೇಟೆ ಇದರ 31ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವ ಸಮಾರಂಭವು ನಾಣ್ಯ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.
ಬೆಳಿಗ್ಗೆ ವಾರ್ಷಿಕ ಮಹಾಸಭೆಯ ಬಳಿಕ ನಡೆದ ಕ್ರೀಡಾಕೂಟಕ್ಕೆ ಹೊನ್ನಪ್ಪ ಬಂಗೇರ ಗಂಪದಕೋಡಿ ಚಾಲನೆ ನೀಡಿದರು.
ಸಂಜೆ ನಡೆದ ವಾರ್ಷಿಕೋತ್ಸವ ಸಮಾರಂಭವು ಸಂಘದ ಅಧ್ಯಕ್ಷ ಬಿ. ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ, ಮಂಗಳೂರು ಯೆನೆಪೋಯ ಯುನಿವರ್ಸಿಟಿಅಸಿಸ್ಟೆಂಟ್ ಪ್ರೊಫೆಸರ್, ಡಾ. ಸ್ವಾತಿ ಪಿ.ಟಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘದ ನಿಕಟ ಪೂರ್ವ ಅಧ್ಯಕ್ಷ ಕೆ .ಅರ್. ದೇವದಾಸ್ ಕೊಡ್ಮಾಣ್, ಮಹಿಳಾ ಸಂಘದ ಅಧ್ಯಕ್ಷೆ ನಯನಾಕ್ಷಿ ಅಡ್ಯಾರ್ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾಪ್ರೋತ್ಸಾಹಧನ ವಿತರಿಸಲಾಯಿತು. ಬಳಿಕ ಮಹಿಳಾ ಘಟಕದ ಸದಸ್ಯರು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರ. ಕಾರ್ಯದರ್ಶಿ ವಿಶ್ವನಾಥ ಕುಲಾಲ್ ವಾರ್ಷಿಕ ವರದಿ ವಾಚಿಸಿದರು, ಜೊತೆ ಕಾರ್ಯದರ್ಶಿ ನವೀನ್ ಚಾಪೆ ಸ್ವಾಗತಿಸಿದರು,ಜಗದೀಶ ನೀರೋಳ್ಬೆ ವಂದಿಸಿದರು.ಶಿಕ್ಷಕಿ ಗೌತಮಿ ಕಾರ್ಯಕ್ರಮ ನಿರೂಪಿಸಿದರು.