ಯೋಗ ಪ್ರಶಿಕ್ಷಣ ಶಿಬಿರ ಸಂಪನ್ನ
ಬಂಟ್ವಾಳ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ.) ಕರ್ನಾಟಕ(ಎಸ್ ಪಿ ವೈ ಎಸ್ ಎಸ್) ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಪೌಂಡೇಶನ್ ಮಂಗಳೂರು ಇದರ ವತಿಯಿಂದ ಕಾರಿಂಜೇಶ್ವರ ದೇವಸ್ಥಾನದಲ್ಲಿ ನಾಲ್ಕುದಿನಗಳ ಪ್ರಾಥಮಿಕ ಯೋಗ ಪ್ರಶಿಕ್ಷಣ ಶಿಬಿರ ಸಂಪನ್ನಗೊಂಡಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಿಬಿರದ ಬಂಟ್ವಾಳ ಸಂಚಾಲಕರಾದ ಕಿಶೋರ್ ವಹಿಸಿದ್ದರು.ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಜಿ.ಪಂ.ಮಾಜಿ ಸದಸ್ಯ ಪದ್ಮಶೇಖರ್ ಜೈನ್ ಅತಿಥಿಗಳಾಗಿ ಭಾಗವಹಿಸಿದ್ದರು.
ನೇತ್ರಾವತಿ ವಲಯ ಸಂಚಾಲಕರಾದ ಅಶೋಕ ಕುಮಾರ್ ಜೈನ್ ಪ್ರಾಸ್ತವನೆಗೈದರು.ಸಮಂತ್ ಸ್ವಾಗತಿಸಿದರು. ಮಲ್ಲಿಕಾ ವಂದಿಸಿದರು.
ರಶ್ಮಿ ಕಾರ್ಯಕ್ರಮ ನಿರೂಪಿಸಿದರು.