Published On: Fri, Jul 20th, 2018

ನಮ್ಮ ಅಂತರಂಗದ ವ್ಯಕ್ತಿತ್ವವನ್ನು ಉತ್ತಮಪಡಿಸಿ, ಸಮಾಜಕ್ಕೆ ಹಿತ ಸಂದೇಶವನ್ನು ನೀಡಬೇಕು: ಡಾ|| ಜಿ. ಭೀಮೇಶ್ವರ ಜೋಷಿ

ಮೂಡುಬಿದಿರೆ: ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯ ವೈಚಾರಿಕತೆಯನ್ನು ಬರವಣಿಗೆಯ ಜನರಿಗೆ ತಲುಪಿಸುವಂತಹ ಕೆಲಸ ಪತ್ರಿಕೋದ್ಯಮ ಮಾಡುತ್ತಿದೆ, ವೃತ್ತಿಪರ ಕೆಲಸದ ಜೊತೆಗೆ ವೈಚಾರಿಕತೆಯನ್ನು ವಿಭಿನ್ನ ನೆಲೆಯಲ್ಲಿ ಕಂಡುಕೊಳ್ಳುವಂತಹ ಕಾರ್ಯ ಇಂದು ಸಮಾಜಕ್ಕೆ ಬೇಕಾಗಿದೆ ಎಂದು ಶ್ರೀ ಆದಿ ಶಕ್ತ್ಯತ್ಮಕ ಅನ್ನಪೂರ್ಣೆಶ್ವರೀ ದೇವಸ್ಥಾನ ಹೊರನಾಡು ಇದರ ಧರ್ಮಕರ್ತರಾದ ಡಾ|| ಜಿ. ಭೀಮೇಶ್ವರ ಜೋಷಿ ಹೇಳಿದರು.

press day (1)
ಮೂಡುಬಿದಿರೆ ಪತ್ರಿಕಾ ದಿನಾಚರಣೆಯ -2018 ಇದರ ಅಂಗವಾಗಿ ಕೆ. ಎನ್. ಭಟ್ ಶಿರಾಡಿಪಾಲ್ ನೆನಪು ಕಾರ್ಯಕ್ರಮವನ್ನು ಉದ್ಘಾಟನೆ ಮಾಡುವ ಮೂಲಕ ಉದ್ಘಾಟನಾ ಭಾಷಣ ಮಾಡಿದರು.
ಧನಲಕ್ಷ್ಮಿ ಕ್ಯಾಶ್ಯೂ ಎಕ್ಸ್‍ಪೋಟ್ರ್ಸ್ ಮಾಲಕರಾದ  ಕೆ.ಶ್ರೀಪತಿ ಭಟ್, ಗಿಲಿಗಿಲಿ ಮ್ಯಾಜಿಕ್ ಖ್ಯಾತಿಯ ಪ್ರೋ ಶಂಕರ್, ನಿವೃತ್ತ ಶಿಕ್ಷಕಿ ಮತ್ತು ಸಾಹಿತಿ ಗಾಯತ್ರಿ ಉಡುಪ, ನಿವೃತ್ತ ಹಿಂದಿ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಯರು  ಆ್ಯಂಡ್ರ್ಯೂ ಡಿ.ಸೋಜಾ ಪಾಲಡ್ಕ,  ಹರಿದಾಸ ಚಂದ್ರಕಾಂತ ಭಟ್, ಪಾಕತಜ್ಞರಾದ   ಪ್ರಶಾಂತ್ ಜೈನ್, ಮಾನಸ ಸ್ಟುಡಿಯೋ ಛಾಯಾಗ್ರಾಹಕರಾದ  ರವಿ ಕೋಟ್ಯಾನ್ ಇವರಿಗೆಲ್ಲರಿಗೂ ಈ ಸಂಧರ್ಭದಲ್ಲಿ ಸನ್ಮಾನ ಮಾಡಲಾಯಿತು.

press day (3)
ಇಂದು ಸಮಾಜಮುಖಿ ಕಾರ್ಯಗಳು ಅಗತ್ಯ ಇಂತಹ ಕಾರ್ಯಗಳನ್ನು ಆಯೋಜಿಸುವುದರಿಂದ ಸುಸಂಸ್ಕøತವಾಗಿ ಬೆಳೆಯಲು ಸಾಧ್ಯ. ಈ ಸಂಧರ್ಭದಲ್ಲಿ ಕೆ. ಎನ್. ಭಟ್ ಶಿರಾಡಿಪಾಲ್ ಅವರ ನೆನಪು ಅಮೋಘ. ಉಸಿರನ್ನು ಹಿಡಿದುಕೊಂಡು ಜನಿಸಿದ ಅವರು ಸಾಯುವ ತನಕ ತನ್ನ ಹೆಸರು ಶಾಶ್ವತವಾಗಿ ಉಳಿಸಿ, ಎಲ್ಲಾ ರೀತಿಯ ಸಾಧನೆ ಮಾಡಿ ಮಾದರಿಯಾಗಿದ್ದಾರೆ. ಶ್ರೀ ಸಾಮಾನ್ಯರಾಗಿ ಜನಿಸಿದ ಅವರು “ತೃಣನಯ” ಎಂಬ ಕಾವ್ಯನಾಮದಿಂದ ತಮ್ಮನ್ನು ತಾವು ಶಿಕ್ಷಣ ರಂಗದಲ್ಲಿ, ಲೇಖಕನಾಗಿ, ಕವಿಯಾಗಿ, ಛಾಯಾಗ್ರಾಹಕನಾಗಿ, ರಂಗ ಕಲಾವಿದನಾಗಿ, ಅಂಕಣಗಾರನಾಗಿ, ಹರಿದಾಸ, ಪಾಕತಜ್ಞ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಧನೆ ಮಾಡಿ ಸೇವೆ ಸಲ್ಲಿಸಿದ್ದಾರೆ. ಇಚ್ಛಾಶಕ್ತಿ, ಪ್ರಾಮಾಣಿಕತೆಯೊಂದಿದ್ದರೆ ಏನನ್ನು ಸಾಧಿಸಬಹುವು ಅನ್ನುವುದಕ್ಕೆ ಇವರು ಸಾಕ್ಷಿ. ಅವರ ಸಾಹಿತ್ಯವನ್ನು ಗಮನಿಸಿದಾಗ ಎಲ್ಲಾ ಧರ್ಮವನ್ನು ಪ್ರೀತಿಸುವಂತಹ ಕಾಳಜಿಯನ್ನು ನಾವು ಕಾಣಬಹುದು. ಇದಕ್ಕೆಲ್ಲಾ ಪೂರಕವಾಗುವಂತೆ ನಾವು ನಮ್ಮ ಅಂತರಂಗದ ವ್ಯಕ್ತಿತ್ವವನ್ನು ಉತ್ತಮಪಡಿಸಿ, ಸಮಾಜಕ್ಕೆ ಹಿತ ಸಂದೇಶವನ್ನು ನೀಡಬೇಕು ಎಂದು ಹೇಳಿದರು. ಪ್ರಾಮಾಣಿಕತೆ, ಆದರ್ಶ, ಪ್ರೀತಿಯಿಂದ ವ್ಯಕ್ತಿತ್ವದ ನಿಜವಾದ ಸಂಸ್ಮರಣೆಯಾಗುತ್ತದೆ. ವ್ಯಕ್ತಿಯ ಬದುಕು ತೆರೆದಿಟ್ಟ ಪುಸ್ತಕದಂತೆ, ಕಷ್ಟವನ್ನು ವಿಚಲಿತವಾಗಿ ಎದುರಿಸಿ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು, ಡಾ| ಎಂ. ಮೋಹನ್ ಆಳ್ವ ಅಧ್ಯಕ್ಷೀಯ ಭಾಷಣ ಮಾತನಾಡಿ, ಪತ್ರಿಕಾ ದಿನಾಚರಣೆಯ ಅಂಗವಾಗಿ ನಡೆದ ಈ ಧೀಮಂತ ನಾಯಕನ ಸ್ಮರಣೆ ಅರ್ಥಪೂರ್ಣ, ಶ್ರೀ ಸಾಮಾನ್ಯರಾಗಿ ಜನಿಸಿದ ಅವರು ಇಚ್ಛಾಶಕ್ತಿ, ಪ್ರಾಮಾಣಿಕತೆಯಿಂದ ಏನನ್ನು ಮಾಡಲು ಸಾಧ್ಯ ಎನ್ನುವುದಕ್ಕೆ ಕೆ. ಎನ್. ಭಟ್ ಶಿರಾಡಿಪಾಲ್ ಅವರ ವ್ಯಕ್ತಿತ್ವವೇ ಸಾಕ್ಷಿ. ಅವರ ಸಾಧನೆಯನ್ನು ಗಮನಿಸಿದರೆ 28 ಮೌಲಿಕ ಕೃತಿಯನ್ನು ರಚಿಸಿದ ದೊಡ್ಡ ಸಾಧಕ. ಅವರ ಜೀವನಶೈಲಿಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಉತ್ತಮ ಸಂಗತಿ, ಇಂತಹ ಕಾರ್ಯಕ್ರಮ ಆಯೋಜಿಸಿದ್ದ ಕಾರ್ಯಕರ್ತರಿಗೆ ಧನ್ಯವಾದಗಳು. ಪತ್ರಿಕೋಧ್ಯಮದ ನಿಜವಾದ ಕಾರ್ಯವನ್ನು ತಿಳಿಸಿದ ವ್ಯಕ್ತಿತ್ವ ಅವರದು. ಪತ್ರಕರ್ತರು ಹುಡುಕುವ ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಅದನ್ನು ಬಿಟ್ಟು ಮೆಚ್ಚಿಸುವ ಕೆಲಸ ಮಾಡುತ್ತಿದೆ. ಸತ್ಯವನ್ನು ಹಿಡಿದುಕೊಂಡು ಆಳಕ್ಕೆ ಹೋಗಿ ಸಮಾಜಕ್ಕೆ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಸತ್ಯದ ಕಡೆಗೆ ಹೆಚ್ಚಿನ ಗಮನ ಕೊಟ್ಟು ಸತ್ಯವನ್ನು ವೈಭವೀಕರಣಗೊಳಿಸುವುದು ಅಗತ್ಯ ಎಂದು ತಿಳಿಸಿದರು. ಪತ್ರ್ರಕರ್ತರು ಮೌಲ್ಯವನ್ನು ಅರಿತುಕೊಂಡು ಸಮಾಜವನ್ನು ಉತ್ತಮ ರೀತಿಯಲ್ಲಿ ಕಟ್ಟಬೇಕು ಎಂದು ಅಧ್ಯಕ್ಷೀಯ ಮಾತುಗಳನ್ನಾಡಿದರು.

press day (2)
ಅವರೊಂದಿಗಿನ ಒಡನಾಟ, ಅನುಭವವನ್ನು ಹಂಚಿಕೊಂಡರು. ತುಂಬಾ ಸೌಮ್ಯ ಸ್ವಭಾವದ ವ್ಯಕ್ತಿತ್ವ ಅವರದು, ಶಾಲೆಯಲ್ಲಿ ಪ್ರಾರ್ಥನೆ ಗೀತೆ, ಹೀಗೆ ಹಲವಾರು ರೀತಿಯ ಕವಿತೆ, ಗೀತೆಯನ್ನು ತಕ್ಚಣ ರಚಿಸುತ್ತಿದ್ದರು. ಹೀಗೆ ಹಲವಾರು ಉದಾಹರಣೆಗಳನ್ನು ತಿಳಿಸುತ್ತಾ ಅವರ ಬಗೆಗಿನ ಸಂಸ್ಮರಣೆ ನುಡಿಯನ್ನು ಸಂತ ತೆರೆಸಾ ಶಾಲೆಯ ನಿವೃತ್ತ ಶಿಕ್ಷಕಿ, ಮೇರಿ ಮೋರಿಸ್ ಶೆಣೈ ಹೇಳಿದರು.
ಕೆ. ಎನ್. ಭಟ್ ಶಿರಾಡಿಪಾಲ್ ಅವರ “ಗೋಮ್ಮಟೇಶ್ವರ ಶತಕ” ಕೃತಿಯನ್ನು ಈ ಸಂಧರ್ಭದಲ್ಲಿ ವಿಷಯ ಪ್ರಸ್ತಾಪಿಸಿದರು. ಅವರ ಕಾವ್ಯವನ್ನು ವಾಚಿಸಿ, ಕಳೆದ ವರ್ಷದ ಯಶಸ್ಸು ನಮಗೆ ಈ ಕಾರ್ಯಕ್ರಮಕ್ಕೆ ಸ್ಫೂರ್ತಿ ಎಂದು ಕಾರ್ಯಕ್ರಮದ ಮುಖ್ಯ ಸಂಘಟಕರಾದ ಕೃಷ್ಣ ಕುಮಾರ್ ಪ್ರಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು.
ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಕೆ. ಎನ್. ಭಟ್ ಶಿರಾಡಿಪಾಲ್ ಅವರ ಧರ್ಮಪತ್ನಿಯಾದ  ವನಜಾ ಶಿರಾಡಿಪಾಲ್, ಯುಗಪುರುಷ ಭುವನಾಭಿರಾಮ ಉಡುಪ, ಶಿರಾಡಿಪಾಲ್ ಅವರ ಪುತ್ರಿ ಅನುಪಮಾ ಚಿಪ್ಳೂಣ್‍ಕರ್ ಇವರು ವೇದಿಕೆಯಲ್ಲಿ ಉಪಸ್ಥಿತದಿದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾದ ಗೌರಿ ಜೋಷಿ ಕಾರ್ಯಕ್ರಮ ನಿರೂಪಣೆ ಮಾಡಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter