ಸುದ್ದಿ9 ಕೈಕಂಬ: ಪೊಳಲಿ ಶ್ರೀ ಅಖಿಲೇಶ್ವರ ದೇವಸ್ಥಾನವು ಅತ್ಯಂತ ಪುರಾತನ ಕ್ಷೇತ್ರವಾಗಿದ್ದು, ಶ್ರೀ ರಾಜರಾಜೇಶ್ವರಿ ದೇವಸ್ಥಾನಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವುದು ತಮಗೆಲ್ಲರಿಗೂ ತಿಳಿದ ವಿಚಾರ. ಪ್ರಕೃತ ದೇವಳದ ಗರ್ಭಗುಡಿಯ ಮೇಲ್ಬಾಗವು ಶಿಥಿಲವಾಗಿದ್ದು, ಮಳೆಗಾಲದಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದ್ದು, ದೈನಂದಿನ ಪೂಜಾ ಕೈಂಕರ್ಯಗಳಿಗೆ ಹಾನಿಯಾಗುತ್ತಿದೆ.ಇದ್ದನ್ನು ದುರಸ್ತಿಗೊಳಿಸಿ ಕ್ಷೇತ್ರದ ಜಿಣರ್ೋದ್ಧಾರದ ಬಗ್ಗೆ ಆಡಳಿತ ಮಂಡಳಿಯು ಪ್ರಶ್ನಾಮಾರ್ಗದ ಮೂಲಕ ಚಿಂತನೆ ಕೈಗೊಂಡಿದೆ.ಪ್ರಶ್ನೆಯಲ್ಲಿ ಸೂಚಿತ ಪ್ರಾಯಶ್ಚಿತ,ಪರಿಹಾರಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಜನವರಿ.22 ಬುಧವಾರ ಬೆಳ್ಳಿಗೆ 8.15ರ ಕುಂಭಲಗ್ನ ಸುಮೂಹುರ್ತಕ್ಕೆ ಸರಿಯಾಗಿ ಅನುಗ್ರಹ ಕಲಶದೊಂದಿಗೆ ಸಾಮೂಹಿಕ ಪ್ರಾರ್ಥನೆ ಮೂಲಕ ಶ್ರೀ ದೇವರ ಅನುಗ್ರಹ ಪಡೆದು ಜೀಣರ್ೋದ್ಧಾರ ಕೆಲಸವನ್ನು ಆರಂಬಿಸಲಾಗಿದೆ . ಊರಿನ ಪ್ರಮುಖರು ಮತ್ತು ಆಡಳಿತ ಸಮಿತಿ ಉಪಸ್ಥಿತರಿದರು.
