ಕರಿಂಜೆ: ಆಟೋ ರಿಕ್ಷಾದಲ್ಲಿ ದನದ ಮಾಂಸ ಸಾಗಾಟ- ಆರೋಪಿ ಬಂಧನ
ಮೂಡುಬಿದಿರೆ: ಕರಿಂಜೆ ಬಳಿ ಆಟೋ ರಿಕ್ಷಾದಲ್ಲಿ ದನದ ಮಾಂಸ ಕೊಂಡೊಯ್ಯುತ್ತಿದ್ದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಕರಿಂಜೆ ಗ್ರಾಮದ ನೀರಳಿಕೆ ಬಳಿ ಭಾನುವಾರ ಸಾಯಂಕಾಲ ಬದ್ರುದ್ದೀನ್ ಎಂಬಾತ ಆಟೋ ರಿಕ್ಷಾದಲ್ಲಿ ಕುಳಿತುಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ತೆರಳಿ ಆತನನ್ನು ವಿಚಾರಿಸಿದರು. ಆಟೋದಲ್ಲಿ ಪೈಂಟ್ ಬಾಕೆಟ್ ನೊಳಗಡೆ ಒಂದೊಂದು ಕೆ.ಜಿ ತೂಕವಿರುವ ಎಂಟು ಪ್ಲಾಸ್ಟಿಕ್ ಚೀಲವಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಬದ್ರುದ್ದೀನ್ ಈ ಬಗ್ಗೆ ಸಮರ್ಪಕ ಉತ್ತರ ನೀಡದಿರುವುದರಿಂದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಯಿಂದ ಆಟೋ ರಿಕ್ಷಾ, ಮಾಂಸ ಮಾರಾಟದಿಂದ ಬಂದ ₹17,500 ನಗದು, ₹2000 ಮೌಲ್ಯದ ದನದ ಮಾಂಸ ಹಾಗೂ ಆರೋಪಿ ಬಳಿ ಇದ್ದ ಮೊಬೈಲ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.