ಎಸ್‍ಎಂಎಸ್, ಮಿಸ್ಡ್ ಕಾಲ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಚೆಕ್
ಮೊಬೈಲ್‍ನಲ್ಲಿ ಬ್ಯಾಂಕಿಂಗ್ ಸೌಲಭ್ಯದ ಮೂಲಕ ವ್ಯವಹಾರ ಸುಲಭಗೊಳಿಸಲು ದೇಶದ ಹೆಚ್ಚಿನ ಬ್ಯಾಂಕ್‍ಗಳು ಮುಂದಾಗಿದೆ. ಪ್ರತಿಯೊಬ್ಬರು ಬ್ಯಾಂಕ್‍ಗೆ ಸಂಬಂಧಿಸಿದಂತೆ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ಮತ್ತು ಮಿನಿ ಸ್ಟೆಟ್ಮೆಂಟ್ ಪಡೆಯಲು ಹಲವು ಮಾರ್ಗಗಳಿವೆ. ನಿಮ್ಮ ಮೊಬೈಲ್ ಮೂಲಕ ಒಂದು ಮಿಸ್ಡ್ ಕಾಲ್ ಅಥವಾ ಎಸ್‍ಎಮ್‍ಎಸ್ ಮಾಡಿದರೆ ಸಾಕು ಬ್ಯಾಂಕ್ ಬ್ಯಾಲೆನ್ಸ್ ವಿವರ ಪಡೆಯಬಹುದು.
ಸರ್ಕಾರಿ ಸಾಮ್ಯದ ಅತೀದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್‍ನಲ್ಲಿ ನೀವು ಖಾತೆ ಹೊಂದಿದ್ದರೆ ನೀವು ಕೂಡ ಇದರ ಪ್ರಯೋಜನ ಪಡೆಯಬಹುದು.
ಇನ್ನು ಮುಂದೆ ಬ್ಯಾಂಕ್ ಅಥವಾ ಎಟಿಎಂಗಳ ಮುಂದೆ ಸಾಲುಗಟ್ಟಿ ನಿಲ್ಲಬೇಕಾಗಿಲ್ಲ. ಬದಲಾಗಿ ಮನೆಯಲ್ಲಿಯೇ ಕುಳಿತು ಎಸ್‍ಎಂಎಸ್ ಮೂಲಕ ನಿಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್ ಅನ್ನು ಚೆಕ್ ಮಾಡಬಹುದು ಹಾಗೂ ಚೆಕ್ ಪಾವತಿಯನ್ನು ಕೂಡ ತಡೆಹಿಡಿಯಬಹುದು.