ಸರ್ಕಾರ ನೀಡಲಿದೆ ಉಚಿತ ಇಂಟರ್ನೆಟ್
ಡಿಜಿಟಲ್ ಪಾವತಿಗೆ ಹೆಚ್ಚಿನ ಪ್ರಚಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಸಾರ್ವಜನಿಕರಿಗೆ ಉಚಿತವಾಗಿ ಇಂಟರ್ ನೆಟ್ ವ್ಯವಸ್ಥೆ ಕಲ್ಪಿಸಲು ಸಿದ್ಧವಾಗಿದೆ. ಮೊಬೈಲ್, ಟ್ಯಾಬ್ಲೆಟ್ ಸೇರಿದಂತೆ ಇತರ ಉಪಕರಣಗಳ ಗ್ರಾಹಕರಿಗೆ 100 ಎಂಬಿ ಉಚಿತ ಡೇಟಾ ಸೌಲಭ್ಯ ಶೀಘ್ರದಲ್ಲಿ ಸಿಗುವ ಸಾಧ್ಯತೆ ಇದೆ.
ಮಾಹಿತಿ ಪ್ರಕಾರ ಕೇಂದ್ರ ಸರ್ಕಾರ ಟ್ರಾಯ್, ದೂರಸಂಪರ್ಕ ವಿಭಾಗ ಹಾಗೂ ನೀತಿ ಆಯೋಗದ ಜೊತೆ ಈ ಸಂಬಂಧ ಮಾತುಕತೆ ನಡೆಸಿದೆ. ಸಭೆ ಬಳಿಕ ಉಚಿತ ಡೇಟಾ ನೀಡುವ ಬಗ್ಗೆ ಟ್ರಾಯ್ ಮಾರ್ಗಸೂಚಿ ಸಿದ್ಧಪಡಿಸಿದೆ. ಈ ತಿಂಗಳೊಳಗೆ ದೂರಸಂಪರ್ಕ ಕಂಪನಿಗಳಿಗೆ ಟ್ರಾಯ್ ಮಾರ್ಗಸೂಚಿ ರವಾನೆ ಮಾಡಲಿದೆ. ಕಂಪನಿಗಳಿಗೆ 100-200 ಎಂಬಿ ಉಚಿತ ಡೇಟಾ ನೀಡುವಂತೆ ಸೂಚನೆ ನೀಡುವ ಸಾಧ್ಯತೆ ಇದೆ.
ನೋಟು ನಿಷೇಧದ ನಂತ್ರ ಕೇಂದ್ರ ಸರ್ಕಾರ ನಗದು ರಹಿತ ವ್ಯಾಪಾರಕ್ಕೆ ಒತ್ತು ನೀಡ್ತಾ ಇದೆ. ಡಿಜಿಟಲ್ ಪಾವತಿಗೆ ಸಂಬಂಧಿಸಿದಂತೆ ನೀತಿ ಆಯೋಗವೊಂದನ್ನು ರಚಿಸಿದೆ. ನೀತಿ ಆಯೋಗ ಡಿಜಿಟಲ್ ಭಾರತಕ್ಕೆ ಅವಶ್ಯವಿರುವ ಎಲ್ಲ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದೆ.