ಬಂಟ್ವಾಳ :ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಕೃಷ್ಣ ಕುಮಾ‌ರ್ ಪೂಂಜರ ಪ್ರಯತ್ನದಿಂದ ಕಳೆದ 4 ವರುಷಗಳಿಂದ ಕೇಂದ್ರ ಸರಕಾರದ ಮಹತ್ವಕಾಂಕ್ಷೆಯ ಯೋಜನೆಯನ್ನು ಸಮಾಜದ ಅರ್ಹರಿಗೆ ತಲುಪಿಸುತ್ತಿರುವ ಸೇವಾಂಜಲಿಯ ಮಾದರಿ ಕಾರ್ಯ ನಮಗೆಲ್ಲ ಪ್ರೇರಣೆಯಾಗಿದೆ ಎಂದು ಉಜಿರೆ ಎಸ್. ಡಿ. ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎ ಜಯಕುಮಾರ ಶೆಟ್ಟಿ ಹೇಳಿದ್ದಾರೆ.

ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಅಶ್ರಯದಲ್ಲಿ  ಬುಧವಾರ ಸೇವಾಂಜಲಿ ಸಭಾಗೃಹದಲ್ಲಿ 47ನೇ ತಿಂಗಳ ಕ್ಷಯ ರೋಗಿಗಳಿಗೆ ಆಹಾರ-ಧವಸಧಾನ್ಯ ವಿತರಿಸಿ ಅವರು ಮಾತನಾಡಿದರು, ಭಾರತದಲ್ಲಿ ಅತೀ ಹೆಚ್ಚು ಕ್ಷಯ ರೋಗಿಗಳಿದ್ದು, ಆತ್ಮವಿಶ್ವಾಸದಿಂದ ಸರಿಯಾಗಿ ಔಷಧಿ ಹಾಗೂ ಪೌಷ್ಟಿಕ ಆಹಾರ ಸೇವಿಸಿದರೆ ರೋಗಮುಕ್ತರಾಗಬಹುದು, ಕ್ಷಯ ರೋಗಿಗಳೊಂದಿಗೆ ಪ್ರೀತಿಯಿಂದ ಬೇರೆಯೋಣ, ರೋಗಿಗಳು ಕ್ಷಯ ಮುಕ್ತರಾಗುವುದು ಕೂಡ ದೇಶ ಸೇವೆಯ ಕಾರ್ಯ ಎಂದು ಹೇಳಿದರು.

ಎನಪೋಯ ಯೂನಿವರ್ಸಿಟಿಯ ಅಸಿಸ್ಟೆಂಟ್ ಪ್ರೊಫೆಸರ್ ಡಾ ಮಾಳವಿಕ ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿದರುವೇದಿಕೆಯಲ್ಲಿ ಬಿ.ಸಿ.ರೋಡಿನ ದಸ್ತಾವೇಜು ಬರಹಗಾರರಾದ ಟಿ. ಗಣೇಶ ರಾವ್ ಮಂಚಿ ಇಂದಿರಾ ದರ್ಶಿನಿ ಸಹಕಾರಿ ಸಂಘ ಮಂಚಿ  ಅಧ್ಯಕ್ಷ ಬಿ ಉಮರ್ ಉಪಸ್ಥಿತರಿದ್ದರು.ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿ, ಕಳೆದ 47 ತಿಂಗಳುಗಳಿಂದ ಸುಮಾರು 258ಕ್ಷಯ ರೋಗಿಗಳಿಗೆ 1100 ರೂ.ಮೌಲ್ಯದ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಗಿದೆ, ಸುಮಾರು 16 ಲಕ್ಷ ರೂ ದಾನಿಗಳ ಸಹಕಾರದಿಂದ ವಿನಿಯೋಗಿಸಲಾಗಿದೆಯಲ್ಲದೆ  ಪ್ರತಿಷ್ಠಾನದ ಮೂಲಕ ಪ್ರತಿ ವರ್ಷ ಸುಮಾರು 45ಲಕ್ಷ ರೂ. ಸೇವಾ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದರು.


ಈ ಸಂದರ್ಭದಲ್ಲಿ ಪ್ತಕಾಶ ಕಿದೆಬೆಟ್ಟು, ಪ್ರಶಾಂತ್ ತುಂಬೆ, ಗಾಯತ್ರಿ ಚಿದಾನಂದ, ಉಮಾ ಚಂದ್ರಶೇಖರ, ಶೇಖರ ಕಲ್ಲತಡಮೆ, ಪದ್ಮನಾಭ ಕಿದೆಬೆಟ್ಟು, ಹರೀಶ್ ಕಡೆಗೋಳಿ, ತನುಷ್ ಶೆಟ್ಟಿ ಮೆರಮಜಲು, ಮದುರಾಜ್ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *