ಬಂಟ್ವಾಳ :ಬಂಟ್ವಾಳ ತಾಲೂಕು ನಿವೃತ್ತ ಸರಕಾರಿ ನೌಕರ ಸಂಘದ ಪ್ರಥಮ ಸಭೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಜರಗಿತು. ಸಂಘದ ನೂತನ ಅಧ್ಯಕ್ಷ ಎಚ್. ಸಂಕಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ನಿಯಮ ಮತ್ತು ನಿಬಂಧನೆಗಳನ್ನು ತಿಳಿಸಿದರು. 

ಹಲವು ವರ್ಷಗಳಿಂದ ಬಂಟ್ವಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಂಚಣಿದಾರರ ಸಂಘವನ್ನು ಬಂಟ್ವಾಳ ತಾಲೂಕು ನಿವೃತ್ತ ಸರಕಾರಿ ಸಂಘ ಎಂದು ಪುನರ್ ರಚಿಸಲಾಗಿದೆ. ಸಂಘದ ಕಛೇರಿಯು ಬಿ.ಸಿ.ರೋಡಿನಲ್ಲಿರುವ ಸರಕಾರಿ ನೌಕರರ ಸಂಘದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಕಟಿಸಿದರು.  ಸಂಘವು ನೋಂದಾವಣೆಯಾಗಿದ್ದು ನೂತನ ಬೈಲಾದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಂಜೇಶ್ವರ ಗೋವಿಂದ ಪೈ ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಜಯಾನಂದ ಪೆರಾಜೆಯವರನ್ನು ಅಭಿನಂದಿಸಲಾಯಿತು.
ಮಾಜಿ ಅಧ್ಯಕ್ಷರಾದ ಲೋಕನಾಥ ಶೆಟ್ಟಿ ,ಉಪಾಧ್ಯಕ್ಷರಾದ ಕೆ ನೀಲೋಜಿ ರಾವ್ , ಟಿ. ಶೇಷಪ್ಪ ಮೂಲ್ಯ ಉಪಸ್ಥಿತರಿದ್ದರು. ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್ ಪಿ. ಲೆಕ್ಕ ಪತ್ರ ಮಂಡಿಸಿದರು. ನಾರಾಯಣ ಪೂಜಾರಿ ಎಸ್. ಕೆ. ಹಿಂದಿನ ಸಭೆಯ ವರದಿ ಮಂಡಿಸಿ ವಂದಿಸಿದರು. ಜೊತೆಕಾರ್ಯದರ್ಶಿ ನಾರಾಯಣ, ಸಂಘಟನಾ ಕಾರ್ಯದರ್ಶಿ ಆನಂದ ನಾಯ್ಕ್ ಎನ್., ಜಯಂತ ಶೆಟ್ಟಿ, ಜಯರಾಮ ಪೂಜಾರಿ, ಲೆಕ್ಕಪರಿಶೋಧಕ ಎಮ್. ಪದ್ಮನಾಭ , ಸದಸ್ಯರಾದ ಮಧುಕರ ಮಲ್ಯ, ಪಿ. ಲೋಕನಾಥ ಶೆಟ್ಟಿ, ಸುಧಾ ವೆಂಕಟರಮಣ ಜೋಶಿ, ಎಮ್. ಸೋಮಪ್ಪ ಮೂಲ್ಯ. ಬಿ.ರಾಮಚಂದ್ರ ರಾವ್, ಬಿ ಚಂದ್ರಶೇಖರ್ , ಕೃಷ್ಣಪ್ಪ ಮೂಲ್ಯ, ಬಾಬು ಮೊಗೇರ, ರಾಘವನ್ ನಾಯರ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *