Published On: Fri, Nov 7th, 2025

ವಂದೇ ಮಾತರಮ್ ೧೫೦ ನೇ ವರ್ಷಾಚರಣೆ ಹೆಮ್ಮೆಯ ಸಂಗತಿ: ಸಂಸದ ಕ್ಯಾ. ಬ್ರಿಜೇಶ್ ಚೌಟ

ಬಂಟ್ವಾಳ: ಹಿಂದುತ್ವದ ಶಕ್ತಿಯನ್ನು ಜಾಗೃತಗೊಳಿಸಿದ, ಯುವ ಮನಸ್ಸುಗಳಲ್ಲಿ ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸಿದ ಅದ್ವಿತೀಯ ಗೀತೆ ವಂದೇ ಮಾತರಮ್ ೧೫೦ ನೇ ವರ್ಷಾಚರಣೆಯು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಶುಕ್ರವಾರ ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಇತಿಹಾಸ ವಿಭಾಗ ವತಿಯಿಂದ ನಡೆದ ಸ್ವಾತಂತ್ರ‍್ಯ ಹೋರಾಟದ ರಣಮಂತ್ರವಾದ ವಂದೇ ಮಾತರಮ್ ಗೀತೆಯ ೧೫೦ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದ ಅವರು,ಈ ಗೀತೆಯು ನಮ್ಮ ನೆಲದಲ್ಲಿ ಮತ್ತೆ ಮತ್ತೆ ಮೊಳಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

 ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್  ಉಳಿಪ್ಪಾಡಿಗುತ್ತು,ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್,ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ 

ಪ್ರೇಮಾನಂದ ಶೆಟ್ಟಿ, ಪದಾಧಿಕಾರಿ ಸುನಿಲ್ ಆಳ್ವ,ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,  ವಂದೇಮಾತರಂ ೧೫೦ನೇ ವರ್ಷಾಚರಣೆಯ ಸಂಚಾಲಕರಾದ ಶ್ಯಾಮಲಾ ಕುಂದರ್ ಹಾಗೂ ಸುಜಿತ್ , ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ವೇದಿಕೆಯಲ್ಲಿದ್ದರು. 

 ಪದವಿ ಹಾಗೂ ಪದವಿಪೂರ್ವ ವಿಭಾಗಗಳು ಜೊತೆಯಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು,  ಪ್ರಧಾನ ಮಂತ್ರಿಗಳ ಆಶಯದಂತೆ ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿ ದೇಶಭಕ್ತಿಯ ಕಿಚ್ಚನ್ನು ಹಚ್ಚಿದ ಗೀತೆಗೆ ೧೫೦ನೇ ವರ್ಷವನ್ನು ಆಚರಿಸಿ ಸಾಮೂಹಿಕವಾಗಿ ಗಾಯನ ಹಾಡಲಾಯಿತು.  

ಬಿಜೆಪಿ ಕಾರ್ಯಕರ್ತರು ಹಾಗೂ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.  ಬಂಟ್ವಾಳ  ಕ್ಷೇತ್ರದ ಬಿಜೆಪಿ ಮಂಡಲಾಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್ ಸ್ವಾಗತಿಸಿದರು.  ಉಪನ್ಯಾಸಕಿ ಶ್ವೇತಾ ವಂದಿಸಿದರು, ಉಪನ್ಯಾಸಕ ಅಶೋಕ್ ಕಾರ್ಯಕ್ರಮ ನಿರ್ವಹಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter