ಅಮ್ಟೂರು : ಅಶ್ವಥ ಉದ್ಯಾಪನೆ -ಕಟ್ಟೆಪೂಜೆ ಹಾಗೂ ಭಜನಾ ಸಂಕೀರ್ತನೆ
ಬಂಟ್ವಾಳ; ಶ್ರೀ ನಿಟಿಲಾಕ್ಷ ಲಕ್ಷದೀಪೋತ್ಸವ ಸಮಿತಿ ಹಾಗೂ ಹರೇಕೃಷ್ಣ ಭಕ್ತವೃಂದ ಅಮ್ಟೂರು ಇವರ ಸಾರಥ್ಯದಲ್ಲಿ ನವೀಕರಣಗೊಂಡ ನಿಟಿಲಾಕ್ಷ ಸದಾಶಿವ ದೇವರ ಅಮ್ಟೂರಿನ ನೂತನ ಕಟ್ಟೆಯಲ್ಲಿ ಅಶ್ವಥ ಉದ್ಯಾಪನೆ -ಕಟ್ಟೆಪೂಜೆ, ಹಾಗೂ ಭಜನಾ ಸಂಕೀರ್ತನೆ ನೆರವೇರಿತು.

ಅಶ್ವತ್ಥ ಕಟ್ಟೆ ನವೀಕರಣದ ಪ್ರಯುಕ್ತ ವಿವಿಧ ವೈಧಿಕ ವಿಧಿ ವಿಧಾನ,ಹೋಮಾದಿಗಳು ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಬಟ್ ನೇತೃತ್ವದಲ್ಲಿ ನಡೆಯಿತು.
ಅಶ್ವತ ಕಟ್ಟೆ ಉದ್ಯಾಪನೆಗೊಂಡು ಮಹಾಪೂಜೆಯ ನಂತರ ರಾತ್ರಿ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಕಟ್ಟೆ ಪೂಜೆ ನೆರವೇರಿತು.ಇದರ ಅಂಗವಾಗಿಬೆಳಿಗ್ಗೆ ಸೂರ್ಯೋದಯ ದಿಂದ ರಾತ್ರಿ 10:30 ರ ತನಕ ಭಜನಾ ಸಂಕೀರ್ತನ ಸೇವೆ ಜರುಗಿತು.
ಸುಮಾರು 20 ಕ್ಕೂ ಅಧಿಕ ಭಜನಾ ತಂಡಗಳು ಭಾಗವಹಿಸಿದ್ದವು, ವಸುಧೈವ ಭಜನಾ ಕುಟುಂಬ ಅಖಂಡ ಭಾರತದ ಭಜಕರೆಲ್ಲ ಸೇರಿ ಮಂಗಳೋತ್ಸವ ನೆರವೇರಿಸಿದರು.
ಹಲವಾರು ಗಣ್ಯರು,ಸ್ಥಳೀಯ ಭಗವದ್ಬಕ್ತರು ಭಾಗವಹಿಸಿದ್ದರು.ಅನ್ನ ಸಂತರ್ಪಣೆಯು ಜರಗಿತು



