Published On: Tue, Nov 4th, 2025

ವೀರಕಂಭ ಗ್ರಾಮ ಪಂಚಾಯತ್  2025-26 ನೇ ಸಾಲಿನ ಗ್ರಾಮ ಸಭೆ: ವಿವಿಧ ವಿಷಯಗಳ ಕುರಿತು ಚರ್ಚೆ

ಬಂಟ್ವಾಳ:  ತಾಲೂಕಿನ ವೀರಕಂಭ ಗ್ರಾಮ ಪಂಚಾಯತಿನ  2025 – 26 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ವೀರಕಂಭ ಮಜಿ ಸರಕಾರಿ  ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಮಂಗಳವಾರ ನಡೆಯಿತು. 

 ಗ್ರಾಮ  ಪಂಚಾಯತ್ ಅಧ್ಯಕ್ಷೆ ಲಲಿತ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಗ್ರಾಮ ಸಭೆ ಮಾರ್ಗದರ್ಶಿ ಅಧಿಕಾರಿಯಾಗಿ  ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯ ಕುಮಾರಿ  ಕಾರ್ಯನಿರ್ವಹಿಸಿದರು.


ವೀರಕಂಭ ಗ್ರಾಮದಲ್ಲಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಅಂಗಡಿಗಳಿಂದ  ಗ್ರಾಮ ಪಂಚಾಯತ್ ಆದಾಯಕ್ಕೆ ಕತ್ತರಿ ಬೀಳುತಿದ್ದು  ಕೂಡಲೇ  ಈ ಬಗ್ಗೆ ಕ್ರಮ ವಹಿಸಬೇಕು,ವೀರಕಂಬ ಗ್ರಾಮಕ್ಕೆ ಪೂರ್ಣ ಅವಧಿಗೆ ಗ್ರಾಮ ಕರಣಿಕರ  ನೇಮಕ ಮಾಡಬೇಕು,9-11 ಲೇ ಔಟ್ ಅನುಮತಿ ಬೂಡದ ಬದಲು ಪಂಚಾಯತ್ ಹಂತದಲ್ಲಿ ಆಗಬೇಕು, ಗ್ರಾಮದಲ್ಲಿ ನಿಗದಿಪಡಿಸಿದ ಗೋ ಮಾಳ ಜಾಗವನ್ನು ಗುರುತಿಸಿ ಗಡಿ ಗುರುತು ಮಾಡಬೇಕು ಹಾಗೂ
ನಾರುಕೋಡಿ ಪರಿಸರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಲ್ಲಿನ ಕೋರೆಯಿಂದಾಗುವ ತೊಂದರೆ ಬಗ್ಗೆ, ಸೂಕ್ತ ಕ್ರಮಕ್ಕೆ  ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಪ್ರಾರಂಭವಾಗಿದ್ದು ಇದರ ಸದ್ಬಳಕೆಗೆ ಗ್ರಾಮಸ್ಥರು ಸಹಕರಿಸಬೇಕೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನವಿ ಮಾಡಿದರು.ವಿವಿಧ ಇಲಾಖಾಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಇಲಾಖಾ ಮಾಹಿತಿ ನೀಡಿದರು.ಇದೇ ವೇಳೆ ಗ್ರಾಮಸ್ಥರಿಂದ ವಿವಿಧ ಬೇಡಿಕೆಗಳ ಮನವಿಯನ್ನು ಸ್ವೀಕರಿಸಲಾಯಿತು.

ಗ್ರಾಮ ಪಂಚಾಯತ್ ಉಪಾಧ್ಯಕ್ಷ  ಜನಾರ್ಧನ ಪೂಜಾರಿ, ಪಂಚಾಯತ್ ಸದಸ್ಯರುಗಳಾದ ದಿನೇಶ್ ಪೂಜಾರಿ,, ಸಂದೀಪ್ ಪೂಜಾರಿ,  ಜಯಪ್ರಸಾದ್, ನಿಶಾಂತ್ ರೈ, ಅಬ್ದುಲ್ ರೆಹಿಮಾನ್,,ಜಯಂತಿ, ಮೀನಾಕ್ಷಿ, ಉಮಾವತಿ, ಶೀಲಾ ನಿರ್ಮಲ ವೇಗಸ್, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿರಕಂಭ ಗ್ರಾಮಸ್ಥರು, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರುಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ್ ಶರ್ಮ ಸ್ವಾಗತಿಸಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ನವೀನ್ ರಾಬರ್ಟ್ ವರದಿ ವಾಚಿಸಿದರು. ಪಂಚಾಯತ್  ಸದಸ್ಯ ಶೀಲಾ ನಿರ್ಮಲ ವೇಗಸ್ ವಂದಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter