ಅಮ್ರತ ಮಹೊತ್ಸವದ ಸಂಭ್ರಮಾಚರಣೆಯಲ್ಲಿ ರೊಸಾ ಮಿಸ್ತಿಕಾ ಶಾಲೆ_DSC4260

13 vp rosamistika

1

2

4

5 6

7

13 vp rosa mistika amrtha mhosthava

_DSC4315

3 ಕಿನ್ನಿಕಂಬಳ: ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆಗೆ 75ರ ಸಂಭ್ರಮ
ಸುದ್ದಿ9 ಕೈಕಂಬ;ಮಕ್ಕಳು ತನ್ನ ಪ್ರತಿಭೆಯನ್ನು ಉದಾತ್ತೀಕರಿಸಲು ಪ್ರಯತ್ನಿಸಬೇಕು. ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರನ್ನು ಅದಕ್ಕೆ ತಕ್ಕಂತೆ ಬೆಳೆಸಬೇಕು ಎಂದು ಗುರುಪುರದ ಪೊಂಪೈ ಚಚರ್್ನ ಧರ್ಮಗುರು ಫಾ| ಗ್ರೆಗರಿ ಸೆರಾವೋ ಹೇಳಿದರು.

ಅವರು ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಕಂಬಳ, ಕೈಕಂಬ ಇದರ ಅಮೃತ ಮಹೋತ್ಸವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.
ಇಂದು ಹೆತ್ತವರು ಮಕ್ಕಳಿಗೆ ಬೇಕಾದ ವಿದ್ಯೆಯನ್ನು ಕೊಡುತ್ತಾರೆ. ಆದರೆ ಅವರನ್ನು ಹಣ ಸೃಷ್ಟಿಸುವ ಯಂತ್ರವನ್ನಾಗಿಸುತ್ತಿದ್ದಾರೆ. ಮಕ್ಕಳು ಉತ್ತಮ ಕೆಲಸಕ್ಕೆ ಸೇರಿ ಹಣ ತಂದು ಕೊಟ್ಟರೆ ಅದನ್ನೇ ದೊಡ್ಡ ವಿಚಾರವೆಂಬಂತೆ ಬಣ್ಣಿಸುತ್ತಾರೆ. ಆದರೆ ಅವರ ವ್ಯಕ್ತಿತ್ವ ವಿಕಸನಕ್ಕೆ ಯಾವ ಕಾರ್ಯವನ್ನೂ ಮಾಡುವುದಿಲ್ಲ. ಮಕ್ಕಳು ಹಣ ಸೃಷ್ಟಿಸುವ ಯಂತ್ರಗಳಲ್ಲ ಎಂಬುವುದನ್ನು ಹೆತ್ತವರು ಭಾವಿಸಬೇಕು. ಅವರನ್ನು ಸಮಾಜಕ್ಕೆ ಬೇಕಾದಂಥ ವ್ಯಕ್ತಿಯನ್ನಾಗಿ ಮಾಡುವಲ್ಲಿ ಹೆತ್ತವರ ಶ್ರಮ ತುಂಬಾ ಇದೆ ಎಂದು ಬಣ್ಣಿಸಿದರು.
ನಂತರ ಮಾತಾಡಿ, ಈ ಶಾಲೆಗೆ 75ರ ಹೊಸ್ತಿಲಲ್ಲಿದೆ. 1939ರಲ್ಲಿ ರೋಸಾಮಿಸ್ತಿಕಾ ಶಾಲೆಯನ್ನು ಸ್ಥಾಪಿಸಿದ್ದು ಆ ಸಂದರ್ಭದಲ್ಲಿ ಐದು ವಿದ್ಯಾಥರ್ಿಗಳಿದ್ದರು. ಆದರೆ ಈಗ 710 ವಿದ್ಯಾಥರ್ಿಗಳು ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಶಾಲೆಗೆ ಕೀತರ್ಿಯನ್ನು ತಂದಿದ್ದಾರೆ. ಅಲ್ಲದೆ ಈ ಶಾಲೆಯಲ್ಲಿ ಕಲಿತ ಅನೇಕ ವಿದ್ಯಾಥರ್ಿಗಳು ಉತ್ತಮ ಪ್ರಜೆಗಳಾಗಿ ಮೂಡಿಬಂದಿದ್ದಾರೆ. ಕೆಲವರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದನ್ನೆಲ್ಲಾ ನೋಡುವಾಗ ನನಗೆ ಬಹಳ ಸಂತಸವಾಗುತ್ತಿದೆ. ಇದೇ ಕ್ರಮವನ್ನು ಈಗ ಕಲಿಯುತ್ತಿರುವ ವಿದ್ಯಾಥರ್ಿಗಳೂ ಸಹ ಮಾಡಬೇಕು ಎಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು.
ಮಂಗಳೂರು ಪ್ರಾಂತ್ಯ ಪ್ರಾಂತ್ಯಾಧಿಕಾರಿಣಿ ವಂ.ಭಗಿನಿ ಮಾರಿಯೆಟ್ ಬಿ.ಎಸ್ ಅಧ್ಯಕ್ಷತೆ ವಹಿಸಿ. ಈ ವರ್ಷ ಡಿ. 12 ರಂದು ಅಮೃತ ಮಹೋತ್ಸವವನ್ನು ಆಚರಿಸಲಿದೆ ಎಂದು ವಿವರಿಸಿದ್ದಾರೆ ಈ ಪ್ರಯುಕ್ತ 75 ಬಲ್ಬ್ಗಳನ್ನೊಳಗೊಂಡ ವಿದ್ಯುತ್ ದೀಪದ ಗುಂಡಿ ಒತ್ತುವ ಮೂಲಕ ಮಾಡಿ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪೊಂಪೈ ಚಚರ್್ನ ಪಾಲನಾ ಸಮಿತಿಯ ಉಪಾಧ್ಯಕ್ಷ ಜೋನ್ಸನ್, ಸಿ.ಆರ್.ಪಿ ಬದ್ರಿಯಾನಗರ
ಕ್ಲಸ್ಟರ್ ಶೀಲಾವತಿ ಕೆ., ಅಂತಾರಾಷ್ಟ್ರೀಯ ಎಸ್.ವಿ.ಪಿ ಹಾಗೂ ಲಯನ್ಸ್ ಸೇವಾ ಸಂಸ್ಥೆಯ ಸದಸ್ಯ
ಜೋನ್ ಓಸ್ವಲ್ಡ್ ಪೆರಿಸ್, ಕೃಷ್ಣ ರಾವ್. ಎಂ.ಟೆಕ್ ಕೆನರಾ ಇಂಜಿನಿಯರಿಂಗ್ ಕಾಲೇಜು ಬೆಂಜನಪದವು.
ಪಡುಬಿದ್ರಿ ಆರಕ್ಷಕಠಾಣೆ ಎಸ್.ಐ. ಅಜ್ಮತ್ ಆಲಿ ಜಿ. ರೋಸಾಮಿಸ್ತಿಕಾ ಕಾನ್ವೆಂಟ್ ಸುಪೀರಿಯರ್
ಭ.ಅಮಿತ ಬಿ.ಎಸ್, ಶಾಲಾ ಸಂಚಾಲಕಿ ಭ.ಜುಲಿಯಾನ ಮೊನಿಸ್ ಮತ್ತು ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ
ರೀಟಾ ಸಿಕ್ವೇರಾ ಉಪಸ್ಥಿತರಿದ್ದರು. ಲೀನಾ ಟಚರ್ ನುಡಿನಮನಗೈದರು, ಶಾಲಾ ಮುಖ್ಯ ಶಿಕ್ಷಕಿ ಭ. ಪ್ರಶಾಂತಿ ಬಿ.ಎಸ್ ಸ್ವಾಗತಿಸಿದರು. ಸಹ ಶಿಕ್ಷಕಿ ಲಿಲ್ಲಿ ವಂದಿಸಿದರು. ಶಿಕ್ಷಕಿ ಆಲಿಸ್ ಡಿ’ಸೋಜಾ ನಿರೂಪಿಸಿದರು. ಈ ಸಂದರ್ಭದಲ್ಲಿ ವಿದ್ಯಾಥರ್ಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲ್ಪಟ್ಟಿತ್ತು.

ಅಮ್ರತ ಮಹೊತ್ಸವದ ಸಂಭ್ರಮಾಚರಣೆಯಲ್ಲಿ ರೊಸಾ ಮಿಸ್ತಿಕಾ ಶಾಲೆ

By suddi9

Leave a Reply

Your email address will not be published. Required fields are marked *