ipl
ಮುಂಬೈ: ಹೊಡೆಬಡಿ ಆಟ ಐಪಿಎಲ್ನ ಏಳನೇ ಆವೃತ್ತಿ ಭಾರತದಲ್ಲಿ ನಡೆಯುವ ಬಗ್ಗೆ ಅನುಮಾನಗಳು ಎದ್ದಿವೆ. ಪಂದ್ಯಾವಳಿಯನ್ನು ನಡೆಸಲು ಉದ್ದೇಶಿಸಲಾಗಿರುವ ತಿಂಗಳಲ್ಲೇ ಲೋಕಸಭಾ ಚುನಾವಣೆ ಕೂಡಾ ಇರುವುದರಿಂದ ಭದ್ರತೆಯ ದೃಷ್ಠಿಯಿಂದ ಐಪಿಎಲ್ಗೆ ಅನುಮತಿ ನಿರಾಕರಿಸುವ ಸಾಧ್ಯತೆಗಳಿವೆ. ಈ ಕಾರಣದಿಂದಾಗಿ ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸುವ ಬಗ್ಗೆ ಚಿಂತಿಸಲಾಗುತ್ತಿದೆ.
ಪಂದ್ಯಾವಳಿಯು ಎಪ್ರಿಲ್ ಮತ್ತು ಜೂನ್ ಮಧ್ಯದಲ್ಲಿ ನಡೆಯಲಿದ್ದು ಲೋಕಸಭಾ ಚುನಾವಣೆ ಕೂಡಾ ಎಪ್ರಿಲ್-ಮೇ ಸಮಯದಲ್ಲಿ ನಡೆಯಲಿದೆ. ಈ ಕಾರಣದಿಂದ ಐಪಿಎಲ್ನ ಹಲವು ಪಂದ್ಯಗಳನ್ನು ದ.ಆಫ್ರಿಕಾಕ್ಕೆ ಸ್ಥಳಾಂತರಿಸುವ ಅನಿವಾರ್ಯತೆ ಉಂಟಾಗಿದೆ. ಈ ಬಗ್ಗೆ ಮಾತನಾಡಿದ ಐಪಿಎಲ್ ಮುಖ್ಯಸ್ಥ ರಂಜಿಬ್ ಬಿಸ್ವಾಲ್ ನಾವು ಆದಷ್ಟು ಪಂದ್ಯಗಳನ್ನು ಭಾರತದಲ್ಲೇ ನಡೆಸಲು ಯೋಚಿಸುತ್ತಿದ್ದೇವೆ. ಈ ಕುರಿತು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆಯೊಡನೆ ಸಮಾಲೋಚನೆ ನಡೆಸಲಿದ್ದು ಖಚಿತ ದಿನಾಂಕಗಳನ್ನು ತಿಳಿಸಿದ ನಂತರ ಅವರ ಅಭಿಪ್ರಾಯವನ್ನು ಪಡೆಯಲಾಗುವುದು. ಸಂಪೂರ್ಣ ಪಂದ್ಯಾವಳಿಯನ್ನು ಭಾರತದಲ್ಲೇ ನಡೆಸಲು ಅನುಮತಿ ದೊರೆತರೆ ಉತ್ತಮ ಎಂದು ಹೇಳಿದ್ದಾರೆ. 2009ರಲ್ಲಿ ಕೂಡಾ ಚುನಾವಣೆಯ ಕಾರಣಕ್ಕೆ ಪಂದ್ಯಾವಳಿಯನ್ನು ದ.ಆಪ್ರಿಕಾಕ್ಕೆ ಸ್ಥಳಾಂತರಿಸಲಾಗಿತ್ತು.

By suddi9

Leave a Reply

Your email address will not be published. Required fields are marked *