ಪ್ರೇಮವಂಚನೆ ಆರೋಪ: ಮಾಜಿ ಸಚಿವ ರಾಮ್ದಾಸ್ ಆತ್ಮಹತ್ಯೆಗೆ ಯತ್ನ
ಮೈಸೂರು: ನಾಟಕೀಯ ಬೆಳವಣಿಗೆಯೊಂದರಲ್ಲಿ ಮಹಿಳೆಯೋರ್ವರ ಆರೋಪದಿಂದ ಮನನೊಂದು ಬಿಜೆಪಿ ಮಾಜಿ ಸಚಿವ ಎಸ್.ಎ. ರಾಮ್ದಾಸ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಿನ್ನೆ ನಡೆದಿದೆ. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದು ಮೈಸೂರಿನ ಅಪೋಲೋ ಆಸ್ಪತ್ರೆಯ ತುತರ್ು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ನಿವಾಸಿ ಮೈಸೂರಿನ ನಗರಪಾಲಿಕೆಯ ಉದ್ಯೋಗಿಯಾಗಿರುವ ಪ್ರೇಮಕುಮಾರಿ(34) ನಿನ್ನೆ ಮೈಸೂರಿನ ಪತ್ರಿಕಾ ಭವನಕ್ಕೆ ಆಗಮಿಸಿ ತಾನು ರಾಮ್ದಾಸ್ ಅನಧಿಕೃತ ಪತ್ನಿ, ತನ್ನನ್ನು ಹಣೆಗೆ ಸಿಂಧೂರ ಇಟ್ಟು ಅನಧಿಕೃತವಾಗಿ ಮದುವೆಯಾಗಿದ್ದಾರೆ. ಆದರೆ ಈಗ ಮೋಸ ಮಾಡ್ತಿದ್ದಾರೆ ಎಂದು ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದರು. ಅಲ್ಲದೆ ತನಗೂ, ರಾಮ್ದಾಸ್ಗೂ ನಡೆದ ಮೊಬೈಲ್ ಸಂಭಾಷಣೆಯನ್ನು ಮಾಧ್ಯಮದವರಿಗೆ ಬಿಡುಗಡೆ ಮಾಡಿದ್ದರು. ಇದೂ ಸಹ ದೃಶ್ಯ ಮಾಧ್ಯಮಗಳಲ್ಲಿ ನೇರವಾಗಿ ಪ್ರಸಾರಕಂಡಿತ್ತು.
ಇದರ ದೃಶ್ಯಾವಳಿಗಳು ದೃಶ್ಯವಾಹಿನಿಗಳಲ್ಲಿ ಬರುತ್ತಿದ್ದಂತೆ ಮನನೊಂದ ರಾಮ್ದಾಸ್ ತನ್ನ ಗೋಕುಲಂನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮಾಧ್ಯಮದವರ ಮುಂದೆ ಕಾಣಿಸಿಕೊಂಡ ಪ್ರೇಮಕುಮರಿ ನನಗೂ ರಾಮ್ದಾಸ್ಗೂ ಐದು ವರ್ಷಗಳಿಂದ ಸಂಬಂಧವಿದ್ದು ತನ್ನನ್ನು ಅವರು ಅನಧಿಕೃತವಾಗಿ ಮದುವೆಯಾಗುವ ಭರವಸೆ ನೀಡಿದ್ದರು. ಹಿಂದೂ ಸಂಪ್ರದಾಯದಂತೆ ತಾಳಿ ಕಟ್ಟದೆ ವರ ಗೋಕುಲಂ ನಿವಾಸದಲ್ಲಿ ಹಣೆಗೆ ಸಿಂಧೂರ ಇಡುವ ಮೂಲಕ ವಿವಾಹವಾಗಿ ಜೀವನ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ ತನ್ನನ್ನು ಅಧಿಕೃತವಾಗಿ ಮದುವೆಯಾಗಲು ನಿರಾಕರಿಸುತ್ತಿರುವ ರಾಮ್ದಾಸ್ನಿಂದಾಗಿ ತಾನು ಮತ್ತು ತನ್ನಿಬ್ಬರು ಮಕ್ಕಳ ಬಾಳು ನರಕಸದೃಶವಾಗಿದೆ. ನಾಳೆ ಪತ್ರಿಕಾ ಗೋಷ್ಠಿ ಕರೆದು ರಾಮ್ದಾಸ್ ವಂಚನೆಯನ್ನು ಬಯಲಿಗೆ ತರುತ್ತೇನೆ ಎಂದು ಹೇಳಿದ್ದರು.
ಆದರೆ ನಿನ್ನೆ ರಾತ್ರಿ ತನ್ನ ರೂಮಿಗೆ ಬಾಗಿಲು ಹಾಕಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರ ರೂಮಿನಿಂದ ಸದ್ದು ಕೇಳಿದ್ದರಿಂದ ಅವರ ಸಂಬಂಧಿಕರು ರೂಮಿನ ಬಾಗಿಲು ಒಡೆದು ನೇಣು ಬಿಗಿದ ಸ್ಥಿತಿಯಲ್ಲಿದ್ದ ರಾಮ್ದಾಸ್ರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂದರ್ಭದಲ್ಲಿ ಡೆತ್ನೋಟ್ ಸಿಕ್ಕಿದೆ ಎಂದು ತಿಳಿದುಬಂದಿದೆ. ಆದರೆ ಅದರಲ್ಲಿ ಏನಿದೆ ಎಂದು ಇನ್ನಷ್ಟೇ ಬಹಿರಂಗವಾಗಬೇಕಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಜಮಾಯಿಸಿದ ಜನರು ಎಲ್ಲಕ್ಕೂ ನೀವೇ ಕಾರಣ ಎಂದು ಮಾಧ್ಯಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಕ್ಸ್:
ಪ್ರೇಮಕುಮಾರಿ ಮಾಧ್ಯಮದವರ ಮುಂದೆ ಮಾತಾಡುತ್ತಿದ್ದಂತೆ, ರಾಮ್ದಾಸ್ ಕರೆ ಮಾಡಿ , ಸುದ್ದಿಗೋಷ್ಠಿ ನಡೆಸಿ ತನ್ನ ಮಾನ ಹರಾಜು ಹಾಕಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರೆ, ಪ್ರೇಮಕುಮಾರಿ ಅದನ್ನು ಲೌಡ್ಸ್ಪೀಕರ್ ಇಟ್ಟು ಮಾಧ್ಯಮದವರಿಗೆ ಕೇಳಿಸಿಕೊಂಡಿದ್ದರು.
ಬೆಳಿಗ್ಗೆ ಸೂರ್ಯನನ್ನು ನೋಡೋಲ್ಲ:
ಮಾಧ್ಯಮಗಳ ದೃಶ್ಯಾವಳಿಗಳನ್ನು ಕಂಡು ಮನನೊಂದ ರಾಮ್ದಾಸ್ ಎಲ್ಲಾ ಮಾಧ್ಯಮಗಳ ಕಚೇರಿಗೆ ಕರೆ ಮಾಡಿಕೊಂಡು ನಾನ್ಯಾರಿಗೂ ಮೋಸ ಮಾಡಿಲ್ಲ, ಆಕೆ ಹುಚ್ಚಿ, ಹಿಂದೆ ಕಷ್ಟದಲ್ಲಿದ್ದ ಆಕೆ ನನ್ನ ಸಹಾಯವನ್ನು ಕೇಳಿಕೊಂಡಿದ್ದಳು, ಪಕ್ಷದ ನಾಯಕರ ಸೂಚನೆಯಂತೆ ಆಕೆಗೆ ಸಹಾಯ ಮಾಡಿದೆ. ನಾನು ಲೋಕ ಸಭೆಗೆ ಸ್ಪಧರ್ಿಸುತ್ತೇನೆ ಎಂದು ಇಂಥಾ ಕೆಲಸ ಮಾಡಿರಬಹುದು, ಬಬ್ಬ ಮೇಲಿನ ಆರೋಪವನ್ನು ಪ್ರಕಟಿಸಿದರೆ ನಾಳೆ ಬೆಳಿಗೆಗ ಸೂರ್ಯನನ್ನು ನೋಡೋಲ್ಲ ಎಂದು ಅಳಲು ತೋಡಿಕೊಂಡಿದ್ದರು.ram

By suddi9

Leave a Reply

Your email address will not be published. Required fields are marked *