
ಬೆಂಗಳೂರು: ಔಷಧಿ ತಯಾರಿಕಾ ಕ್ಷೇತ್ರದ ದೈತ್ಯ ಸಿಪ್ಲಾದ ಮುಖ್ಯಸ್ಥ ಯೂಸುಫ್ ಹಮೀದ್ ಭಾರತದಲ್ಲಿ ರಸಾಯನಶಾಸ್ತ್ರ ಶಿಕ್ಷಣವನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ರೂ, 8 ಕೋಟಿಯನ್ನು ದೇಣಿಗೆಯಾಗಿ ನೀಡಿದ್ದಾರೆ.
ಬ್ರಿಟನ್ ಮೂಲದ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಸಂಸ್ಥೆ ಜೊತೆ ಕೈಜೋಡಿಸಿರುವ ಹಮೀದ್ ದೇಶದಲ್ಲಿ ಕೆಮಿಸ್ಟ್ರಿ ಕಲಿಯುವ ವಿದ್ಯಾಥರ್ಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಮೊತ್ತವನ್ನು ನೀಡಿರುವುದಾಗಿ ತಿಳಿಸಿದ್ದಾರೆ. ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯಲ್ಲಿ ಅನೇಕ ಭಾರತೀಯ ಉದ್ಯೋಗಿಗಳಿದ್ದು ಭಾರತದಲ್ಲಿ ರಾಸಾಯನಿಕ ಶಿಕ್ಷಣವನ್ನು ಉತ್ತಮಗೊಳಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಹಮೀದ್ ನೀಡಿರುವ ಮೊತ್ತದ ನೆರವಿನಿಂದ ದೇಶಾದ್ಯಂತ ಕೆಮಿಸ್ಟ್ರಿ ಕಲಿಯಬಯಸುವ ವಿದ್ಯಾಥರ್ಿಗಳನ್ನು ಗುರುತಿಸಿ ಅವರಿಗೆ ಕಲಿಕೆಯಲ್ಲಿ ಸಹಕಾರ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
