ಶ್ರೀಶ ಎಳ್ಳಾರೆ ಸಾರಥ್ಯದ ಕನಸು ಕ್ರಿಯೇಷನ್ಸ್ ನ ತುಳುಲಿಪಿ ಲಾಂಛನ ಬಿಡುಗಡೆ

ಕಾರ್ಕಳ :ಕೋಸ್ಟಲ್ ವುಡ್ ನ ಯುವ ನಿರ್ದೇಶಕ ಶ್ರೀಶ ನಾಯಕ್ ಎಳ್ಳಾರೆ ಸಾರಥ್ಯದ ಕನಸು ಕ್ರಿಯೇಷನ್ಸ್ ನ ತುಳುಲಿಪಿ ಲಾಂಛನವನ್ನು ಶಕಲಕ ಬೂ0 ಬೂ0 ತುಳು-ಕನ್ನಡ ಚಿತ್ರದ More...

by suddi9 | Published 11 months ago
By suddi9 On Friday, December 25th, 2020
0 Comments

ಆರ್ ಬಿ, ಸುರೇಂದ್ರ, ರೇಷ್ಮಾ ಶೆಟ್ಟಿ ಸಹಿತ ಸಾಧಕರಿಗೆ ಚೈತನ್ಯ ಶ್ರೀ ಪ್ರಶಸ್ತಿ

ಕಾರ್ಕಳ :ಕಾರ್ಕಳದ ವಿಜಯವಾಣಿ ವರದಿಗಾರ, ಪತ್ರಕರ್ತರ ಸಂಘದ ಅಧ್ಯಕ್ಷ ಆರ್. ಬಿ ಜಗದೀಶ್, ಯುವ ರಂಗಕರ್ಮಿ More...

By suddi9 On Wednesday, December 9th, 2020
0 Comments

ಯಕ್ಷವೈಭವ ಮಕ್ಕಳ ಮೇಳ ಎಳ್ಳಾರೆ-ಮುಂಬೈ :9ನೇ ವರ್ಷದ ವಾರ್ಷಿಕೋತ್ಸವ

ಕಾರ್ಕಳ: ಎಳ್ಳಾರೆ ಶಂಕರ್ ನಾಯಕ್ ಭಾಗವತರ ನೇತ್ರತ್ವದ ಯಕ್ಷವೈಭವ ಮಕ್ಕಳ ಮೇಳ ಎಳ್ಳಾರೆ-ಮುಂಬೈ ಇದರ More...

By suddi9 On Thursday, November 19th, 2020
0 Comments

ಪ್ರತಿಭೆಯನ್ನು ಬಾಲ್ಯದಲ್ಲಿಯೇ ಪ್ರೋತ್ಸಾಹಿಸಿ- ವಿದ್ಯಾ ಪೈ

ಅಜೆಕಾರು: ಮಕ್ಕಳ ಪ್ರತಿಭೆಗೆ ತಕ್ಕ, ಸಕಾಲಿಕ ಪ್ರೋತ್ಸಾಹ, ಮಾರ್ಗದರ್ಶನ ನೀಡಬೇಕು. ಹಾಗಾದಾಗ ಮಾತ್ರ More...

By suddi9 On Thursday, November 19th, 2020
0 Comments

ಎಳ್ಳಾರೆ ಶ್ರೀ ಜನಾರ್ದನ ಶಾಲೆಯ ನೂತನ ಕಟ್ಟಡದ ಭೂಮಿ ಪೂಜನ ಕಾರ್ಯಕ್ರಮ

ಕೈಕಂಬ :ವಿದ್ಯಾಭಾರತಿ ಸಂಯೋಜಿತ ಎಳ್ಳಾರೆ ಶ್ರೀ ಜನಾರ್ದನ ಶಾಲೆಯ ನೂತನ ಕಟ್ಟಡದ ಭೂಮಿ ಪೂಜನ ಕಾರ್ಯಕ್ರಮವು More...

By suddi9 On Monday, October 5th, 2020
0 Comments

ಪ್ರಗತಿಗೆ ಹಿರಿಯರ ಮಾರ್ಗದರ್ಶನ ಬೇಕು: ಮಂಜುನಾಥ

ಅಜೆಕಾರು: ಹಿರಿಯರನ್ನು ಗೌರವಿಸುವುದು ನಮ್ಮನ್ನು ನಾವು ಗೌರವಿಸಿಕೊಂಡಂತೆ, ನಮ್ಮ ಪ್ರಗತಿಗೆ ಅವರ More...

By suddi9 On Sunday, October 4th, 2020
0 Comments

ವೀಡಿಯೊ ಗ್ರಾಫರ್ ಪ್ರಸನ್ನ ಆರ್ಯ ಬಾವಿಗೆ ಹಾರಿ ಅತ್ಮಹತ್ಯೆ

ಕಾರ್ಕಳ:ಕೊರೊನಾ ಸೊಂಕು ದ್ರಡಪಟ್ಟ ವ್ಯಕ್ತಿ  ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ಕೊಂಡ ಘಟನೆ  More...

By suddi9 On Friday, October 2nd, 2020
0 Comments

ಹಿರಿಯರೆಡೆಗೆ ನಮ್ಮ ನಡಿಗೆ: ಎಂ.ರತ್ನಾಕರ ರಾವ್, ಮಾಲತಿ.ಕೆ ದಂಪತಿಗೆ ಗೌರವ ಹಿರಿಯರನ್ನು ಕಡೆಗಣಿಸಬೇಡಿ: ರತ್ನಾವತಿ ನಾಯಕ್

ಅಜೆಕಾರು: ಹಿರಿಯರನ್ನು ಕಡೆಗಣಿಸಬೇಡಿ. ಅವರ ಸಹಾಯಗುಣ, ಸರಳತೆ, ಕಾಳಜಿ, ಪ್ರೀತಿ ಮೊದಲಾದ ಆದರ್ಶಗಳನ್ನು More...

By suddi9 On Saturday, September 12th, 2020
0 Comments

ಹಿರಿಯರ ಉತ್ಸಾಹ ಅನುಕರಣೀಯ: ಗೋಪಿನಾಥ ಭಟ್

ಅಜೆಕಾರು: ಹಿರಿಯರನ್ನು ನೆನಪಿಸಿಕೊಳ್ಳುವ ಹಿರಿಯರೆಡೆಗೆ ನಡಿಗೆ ಉತ್ತಮ ಕಾರ್ಯಕ್ರಮ. ನಮ್ಮ ಮಕ್ಕಳನ್ನು ಸಮಾಜದ ಮತ್ತು ನಮ್ಮ ಸಂಪತ್ತಾಗಿ ರೂಪಿಸುವ ಶಿಕ್ಷಕರ ಸೇವೆ ಅಮೂಲ್ಯವಾದುದು. ೮೦ ರ ಹರೆಯದಲ್ಲೂ ಮೌರೀಸ್ ಅವರ ಉತ್ಸಾಹ ಅನುಕರಣೀಯ ಎಂದು ಯುವ ಉದ್ಯಮಿ, ಸಮಾಜ ಸೇವಾಸಕ್ತ ಗೋಪಿನಾಥ ಭಟ್ ಮುನಿಯಾಲು ಹೇಳಿದರು. ಅವರು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ಅಜೆಕಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಘಟಕ, ಆದಿಗ್ರಾಮೋತ್ಸವ ಸಮಿತಿಯ ಸಹಕಾರದೊಂದಿಗೆ ಆಯೋಜಿಸಿದ್ದ ’ಹಿರಿಯರೆಡೆಗೆ ನಮ್ಮ ನಡಿಗೆ’ ಶಿಕ್ಷಕರಿಗೆ ಗೌರವ ಕಾರ್ಯಕ್ರಮದಲ್ಲಿ ವಿಶ್ರಾಂತ ಮುಖ್ಯೋಪಾಧ್ಯಾಯ ಮೌರೀಸ್ ತಾವ್ರೋ ಅವರನ್ನು ಗೌರವಿಸಿ ಮಾತನಾಡುತ್ತಿದ್ದರು. ಅವರ ಪತ್ನಿ ಲಿಲ್ಲಿ ತಾವ್ರೋ ಅವರನ್ನೂ ಗೌರವಿಸಲಾಯಿತು. ಸಮಿತಿಯ ರಾಜ್ಯಾಧ್ಯಕ್ಷ, ಹಿರಿಯ ಪತ್ರಕರ್ತ ಡಾ.ಶೇಖರ ಅಜೆಕಾರು ಅವರು ಅಧ್ಯಕ್ಷತೆ ವಹಿಸಿ ಹಿರಿಯರ ಸಂತೋಷ ಮತ್ತು ಉತ್ತಮ ಪ್ರತಿಕ್ರಿಯೆ ಸಂತೋಷ ತಂದಿದೆ. ವಿವಿಧ ಕ್ಷೇತ್ರದ ಸಾಧಕರನ್ನು ಸರಣಿ ಕಾರ್ಯಕ್ರಮವಾಗಿ ಸಮಿತಿ ಗೌರವಿಸಲಿದೆ ಎಂದರು. ಶಾಲೆಯಲ್ಲಿ ಬೆತ್ತವನ್ನು ಶಿಕ್ಷಕರ ಕೊಠಡಿಯಲ್ಲಿಡಿ ಅಗತ್ಯ ಬಿದ್ದರೆ ಮಾತ್ರ ತರಗತಿಯಿಂದ ಹೋಗಿ ತನ್ನಿ ಎಂಬ ಸೂತ್ರವನ್ನು ೪೦ ವರ್ಷದ ಮೊದಲು ನಮ್ಮ ಶಾಲೆಯಲ್ಲಿ ಪ್ರಯೋಗಕ್ಕೆ ತಂದಿದ್ದೆವು. ಅದು ಆಗ ಪರಿಣಾಮಕಾರಿಯಾಗಿತ್ತು. ವಿದ್ಯಾರ್ಥಿಗಳೇ ನಮ್ಮ ಸಂಪತ್ತು ಎಂದು ಮೌರೀಸ್ ತಾವ್ರೋ ಅವರು ಗೌರವಕ್ಕೆ ಉತ್ತರಿಸಿದರು. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಮುಖ್ಯೋಪಾಧ್ಯಾಯರಾದ ಎ.ಶಾಂತಿರಾಜ ಹೆಗ್ಡೆ, ಮಕರಂದ ಎಸ್.ಹೆಗ್ಡೆ, ವ್ಯಾಪಾರೋದ್ಯಮಿ-ಕವಿ ಬಾಲಕೃಷ್ಣ ಹೆಗ್ಡೆ ಅಜೆಕಾರು, ಸಾಹಿತಿ ಪ್ರೇಮಾ.ವಿ.ಸೂರಿಗ, ಕುರ್ಸುಕಟ್ಟೆ ಅಂಗನವಾಡಿ ಶಿಕ್ಷಕಿ ಶಕುಂತಳ ಅತಿಥಿಗಳಾಗಿದ್ದರು. ಸಮಿತಿಯ ಸದಸ್ಯ ಸಂತೋಷ್ ಜೈನ್ ಎಣ್ಣೆಹೊಳೆ, ಡ್ಯಾರೆಲ್ ಅಲ್ಮೇಡಾ, ಸುನಿಜ, ಸುನಿಧಿ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಎಸ್.ಅಜೆಕಾರು ಅವರು ವಂದಿಸಿದರು.  More...

By suddi9 On Tuesday, September 8th, 2020
0 Comments

ಶಿಲ್ಪಿ ಕೆ.ಶಿವರಾಮ ಆಚಾರ್ಯ ನಿಧನ

ಕಾರ್ಕಳ:  ಪ್ರಸಿದ್ಧ ಶಿಲ್ಪಿ, ಕರ್ನಾಟಕ ಶಿಲ್ಪಕಲಾ ರತ್ನ, ಕರುನಾಡ ಪದ್ಮಶ್ರೀ ಸಹಿತ ಅನೇಕ ಗೌರವಗಳಿಗೆ ಪಾತ್ರರಾಗಿದ್ದ ಕೆ.ಶಿವರಾಮ ಆಚಾರ್ಯ (೫೫) ಅವರು ಹೃದಯಾಘಾತದಿಂದ ಸೋಮವಾರ ಬೆಂಗಳೂರಿನಲ್ಲಿ ನಿಧನರಾದರು.ದೇವಾಲಯ. ದೈವಾಲಯಗಳು, ಮೂರ್ತಿಗಳ ನಿರ್ಮಾಣದಲ್ಲಿ ನಿಷ್ಣಾತರಾಗಿದ್ದ ಅವರು ರಾಜ್ಯದ ಮತ್ತು ಮುಂಬಯಿ ಸೇರಿ ವಿವಿದೆಡೆ ಶಿಲಾ ದೇವಾಲಯಗಳನ್ನು ನಿರ್ಮಿಸಿ ಖ್ಯಾತರಾಗಿದ್ದರು.  ಶಿಲ್ಪಕಲಾ ಅಕಾಡೆಮಿಯ ಮೊದಲ ಅಧ್ಯಕ್ಷರಾದ ಶ್ಯಾಮರಾಯ ಆಚಾರ್ಯ ಅವರ ಶಿಷ್ಯರಾಗಿ ಭಾರತೀಯ ಶಿಲ್ಪಶಾಸ್ತ್ರದ ಅನುಭವ ಹೊಂದಿದ್ದರು. ಹಿಂದೆ ಅವರು ಕಾರ್ಕಳದ ಬಾಹುಬಲಿ ಮಸ್ತಕಾಭಿಷೇಕ ಸಂದರ್ಭ ಸಹಿತ ಕೆಲವು ಕಡೆಗಳಲ್ಲಿ ತಮ್ಮ ರಚನೆಯ ಶಿಲ್ಪ ಕಲಾಕೃತಿಗಳನ್ನು ಪ್ರದರ್ಶಿಸಿ ಪ್ರಶಂಸೆಗೆ ಪಾತ್ರರಾಗಿದ್ದರು.ದೇವಾಲಯ ನಿರ್ಮಾಣದ ಸಂದರ್ಭಗಳಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾಧ ವೀರೇಂದ್ರ ಹೆಗ್ಗಡೆ, ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಜಿ, ಕೇಮಾರು ಈಶ ವಿಠಲದಾಸ ಸ್ವಾಮಿಜಿ ಸಹಿತ ನಾಡಿನ ಅನೇಕ ಸ್ವಾಮಿಜಿಗಳಿಂದ ಗೌರವ ಸ್ವೀಕರಿಸಿದ್ದರು. ಕಾರ್ಕಳ ಕುಕ್ಕುಂದೂರಿನಲ್ಲಿ ಶ್ರೀ ದುರ್ಗಾ ಶಿಲ್ಪಕಲಾ ಹೆಸರಿನ ಶಿಲಾಶಿಲ್ಪ ತಯಾರಿಯ ಕೇಂದ್ರವನ್ನು ಮತ್ತು ಎರ್ಲಪಾಡಿ ಬಳಿ ಶಿಲ್ಪ ತಯಾರಿಯ ಆಧುನಿಕ ಸಂಸ್ಥೆಯನ್ನು ಹೊಂದಿದ್ದರು. ಕಿರಿಯ ವಯಸ್ಸಿನಲ್ಲಿಯೇ ಸಾಧನೆ ಮಾಡಿದ ಅವರು ಹತ್ತಾರು ಶಿಷ್ಯರನ್ನು ಹೊಂದಿದ್ದಾರೆ. ಗೋವಾದಲ್ಲಿ ನಡೆದ ಹೊರನಾಡ ಕನ್ನಡಿಗರ ಸಮ್ಮೇಳನದಲ್ಲಿ ಕರುನಾಡ ಪದ್ಮಶ್ರೀ, ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಶಿಲ್ಪಕಲಾ ರತ್ನ ಗೌರವವನ್ನು, ಕಾಸರಗೋಡು ದಸರಾದಲ್ಲಿ ದಸರಾ ಗೌರವ, ಮೈಸೂರು ಬುದ್ಧಿ ಜೀವಿಗಳ ಬಳಗ ಶಿಲ್ಪ ಕಲಾ ಸಾಧನಾ ಗೌರವ, ಕಾಸರಗೋಡಿನ ವಿಶ್ವದರ್ಶನ ಪ್ರಶಸ್ತಿ ಸಹಿತ ಅನೇಕ ಗೌರವಗಳಿಗೆ ಪಾತ್ರರಾಗಿದ್ದರು.ಅವರು ನಾಲ್ವರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.  More...

Get Immediate Updates .. Like us on Facebook…

Visitors Count Visitor Counter