ಅಜೆಕಾರು: ನುರಿತ ಡೀಸೇಲ್ ಮೆಕಾನಿಕ್, ಅಜೆಕಾರಿನಲ್ಲಿ ೨೫ ವರ್ಷಗಳ ಸಾರ್ಥಕ ಸೇವೆಗೈದ, ಚೈತನ್ಯಶ್ರೀ ಕರ್ನಾಟಕ ರತ್ನ ಗೌರವಕ್ಕೆ ಪಾತ್ರರಾದ ಸಾಣೂರು ಅರುಣ್ ಶೆಟ್ಟಿಗಾರ್ ಅಜೆಕಾರ ಅವರನ್ನು ಮಮತಾ ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರದ ವತಿಯಿಂದ ಅಜೆಕಾರು ಶ್ರೀ ರಾಮ ಮಂದಿರದಲ್ಲಿ ಸನ್ಮಾನಿಸಲಾಯಿತು.

ವಿಶ್ರಾಂತ ಜಿಲ್ಲಾ ಯುವಜನ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಕರುಣಾಚಂದ್ರ ಅವರು ಸನ್ಮಾನ ನೆರವೇರಿಸಿ ಪ್ರತಿಯೊಬ್ಬರೂ ತಮ್ಮ ತಮ್ಮ ವೃತ್ತಿಯಲ್ಲಿ ಪ್ರಾವೀಣ್ಯತೆ ಪಡೆಯುವುದೇ ನಿಜವಾದ ಸಾಧನೆ, ಅರುಣ್ ಅವರು ವೃತ್ತಿ ಸಾಧನೆಯ ಜೊತೆಗೆ ಸಂಘ ಸಂಸ್ಥೆಗಳನ್ನು ಮತ್ತು ಕ್ರೀಡಾ ಚಟುವಟಿಕೆಗಳನ್ನು ಸತತ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಎಂದರು.

ಅಂತಾರಾಷ್ಟ್ರೀಯ ಕ್ರೀಡಾಪಟು ವಿದ್ಯಾ ಪೈ, .ತಾಲೂಕು ಪಂಚಾಯತ್‌ನ ಮಾಜಿ ಉಪಾಧ್ಯಕ್ಷ ಹರೀಶ್ ನಾಯಕ್, ನಂದಕುಮಾರ್ ಹೆಗ್ಡೆ, ಸುಭಾಶ್ಚಂದ್ರ ಹೆಗ್ಡೆ, ಪ್ರಶಾಂತ್ ಶೆಟ್ಟಿ, ಸತ್ಯೇಂದ್ರ ಕಿಣಿ, ರಾಮಕೃಷ್ಣ ಹೆಗ್ಡೆ, ರವಿ ಹೆರ್ಮುಂಡೆ, ಗುರುಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *