ಕಾರ್ಕಳ: ಯಕ್ಷ ವೈಭವ ಮಕ್ಕಳ ಮೇಳ ಮುಂಬೈ-ಎಳ್ಳಾರೆ ಇವರ ವತಿಯಿಂದ ಮುನಿಯಾಲು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಯಕ್ಷಗಾನ ಗಾನ ವೈಭವ ಮತ್ತು ನೃತ್ಯವೈಭವ ನಡೆಯಿತು.WhatsApp Image 2021-11-01 at 8.52.22 PMಉದ್ಯಮಿ ಮುನಿಯಾಲು ದಿನೇಶ್ ಪೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬಡಗುತಿಟ್ಟು ಯಕ್ಷಗಾನದ ಖ್ಯಾತ ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣರವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾದ ಬಿ.ಸದಾಶಿವ ಪ್ರಭು ಎಳ್ಳಾರೆ ಮಾತನಾಡಿ ಪುಟ್ಟ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ ಉತ್ತಮ ಕಲಾವಿದರನ್ನಾಗಿ ರೂಪಿಸುತ್ತಿರುವ ಎಳ್ಳಾರೆ ಶಂಕರ್ ನಾಯಕ್ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದರು.

ಈ ಸಂಧರ್ಭದಲ್ಲಿ ಸದಾಶಿವ ಭಟ್ ಸೂರಿಮಣ್ಣು, ಡಾ.ಸುದರ್ಶನ್ ಹೆಬ್ಬಾರ್, ಶ್ರೀಧರ್ ಪೈ ಮುನಿಯಾಲು ಉಪಸ್ಥಿತರಿದ್ದರು. ಸರ್ವೋತ್ತಮ ನಾಯಕ್ ಶ್ರೀ ಸುದರ್ಶನ್ ಅಜೆಕಾರು, ಶ್ರೀ ದೇವೇಂದ್ರ ಕಾಮತ್,ದೀಪಕ್ ಕಾಮತ್, ಸಂಜೀವ ಆಚಾರ್ ಸಹಕರಿಸಿದರು. ಹರೀಶ್ ನಾಯಕ್ ಅಜೆಕಾರು ಕಾರ್ಯಕ್ರಮ ನಿರೂಪಿಸಿ, ಭಾಗವತ ಶಂಕರ್ ನಾಯಕ್ ಎಳ್ಳಾರೆ ವಂದಿಸಿದರು

By suddi9

Leave a Reply

Your email address will not be published. Required fields are marked *