ಎಳ್ಳಾರೆ ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ದಿವ್ಯಾ ಕಾಮತ್ ಆಯ್ಕೆ
ಕಾರ್ಕಳ: ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ದಿವ್ಯಾ ಕಾಮತ್ ಎಳ್ಳಾರೆ, ಉಪಾಧ್ಯಕ್ಷರಾಗಿ ಜ್ಯೋತಿ ನಾಯಕ್ ಹಾಗೂ ದಿನೇಶ್ ನಾಯ್ಕ್. ಕಾರ್ಯದರ್ಶಿಯಾಗಿ ರಾಜೇಶ್, ಜತೆ ಕಾರ್ಯದರ್ಶಿಯಾಗಿ ಶಕುಂತಲಾ, ಕೋಶಾಧಿಕಾರಿಯಾಗಿ ಶಾಂತಿ ಪ್ರಭು ಹಾಗೂ ರಂಜನಿ ಪ್ರಸಾದ್, ಗೌರವ ಸಲಹೆಗಾರರಾಗಿ ಸ್ವಾತಿ ನಾಯಕ್ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಸ್ಥಾಪಕರಾದ ದೇವೇಂದ್ರ ಕಾಮತ್, ರವೀಂದ್ರ ಪ್ರಭು, ಪ್ರಸಾದ್ ಪ್ರಭು ಉಪಸ್ಥಿತರಿದ್ದರು.