ಎಳ್ಳಾರೆ ಯಕ್ಷವೈಭವ ಮಕ್ಕಳ ಮೇಳದ ಮನೆ ಮನೆ ಯಕ್ಷಗಾನ ತಿರುಗಾಟದ ಸಮಾರೋಪ
ಕಾರ್ಕಳ: ಯಕ್ಷವೈಭವ ಮಕ್ಕಳ ಮೇಳ ಎಳ್ಳಾರೆಯ ವತಿಯಿಂದ ಭಾಗವತ ಶಂಕರ್ ನಾಯಕ್ ಎಳ್ಳಾರೆ ನೇತ್ರತ್ವದಲ್ಲಿ ನಡೆದ ಮನೆ ಮನೆ ಯಕ್ಷಗಾನ ತಿರುಗಾಟದ ಸಮಾರಂಭ ಎಳ್ಳಾರೆ ಪಾಲ್ಬೆಟ್ಟು ಶ್ರೀ ಗದ್ದಿಗೆ ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯಿತು. ಮದ್ದಳೆಗಾರ ಆನಂದ್ ಭಟ್ ಪೆರ್ಡೂರು ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರ್ಗಾನ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಮೊಕ್ತೇಸರ ಅಶೋಕ್ ನಾಯಕ್, ಭಾಗವತರಾದ ಸುರೇಶ್ ಶೆಟ್ಟಿ, ಸುಧೀರ್ ಭಟ್ ಪೆರ್ಡೂರು, ನಾಗಪಾತ್ರಿ ನಾಗಾನಂದ ವಾಸುದೇವ ಆಚಾರ್ಯ,ಕಡ್ತಲ ಗ್ರಾ.ಪಂ ಅಧ್ಯಕ್ಷೆ ಮಾಲತಿ ದಿನೇಶ್ ಕುಲಾಲ್, ಉಪಾಧ್ಯಕ್ಷ ಸತೀಶ್ ಪೂಜಾರಿ,ಮುಳ್ಕಾಡು ಶಾಲೆಯ ಮುಖ್ಯ ಶಿಕ್ಷಕ ಜನಾರ್ದನ ಬೆಳಿರಾಯ, ಅರ್ಚಕ ಪ್ರಶಾಂತ್ ನಾಯ್ಕ್, ಸಂಜೀವ ಆಚಾರ್ ಉಪಸ್ಥಿತರಿದ್ದರು. ದೇವೇಂದ್ರ ಕಾಮತ್ ಎಳ್ಳಾರೆ ಸ್ವಾಗತಿಸಿ ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.