ಕಾರ್ಕಳ: ಯೂಥ್ ಫಾರ್ ಸೇವಾ, ಉಡುಪಿ ಇವರ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಕಡ್ತಲ, ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆ ಇವರ ಸಹಕಾರದೊಂದಿಗೆ ಸೇವಾ ಸಿಂಧು ಇವರ ಸಂಯೋಜನೆಯಲ್ಲಿ ಎಲ್ಲಾ ವರ್ಗದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಇ-ಶ್ರಮ ಯೋಜನೆ ಅಸಂಘಟಿತ ಕಾರ್ಮಿಕ ಕಾರ್ಡ್ ನೋಂದಣಿ ಕಾರ್ಯಕ್ರಮವು ಎಳ್ಳಾರೆ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದಲ್ಲಿ ನಡೆಯಿತು.WhatsApp Image 2021-09-27 at 12.16.18 PMರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕರಾದ ಬೈಲಂಗಡಿ ಜಯರಾಮ್ ನಾಯಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಯೂಥ್ ಫಾರ್ ಸೇವಾ ಉಡುಪಿ ಇದರ ಸದಸ್ಯೆ ರಮಿತಾ ಶೈಲೇಂದ್ರಾ ರಾವ್,ದೇವಳದ ಪ್ರಧಾನ ಅರ್ಚಕ ಪುಟ್ಟಣ್ಣ ಅಡಿಗ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವ ಪೂಜಾರಿ ,ಕಡ್ತಲ ಗ್ರಾ.ಪಂ ನಿಕಟ ಪೂರ್ವ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ ಹಾಗೂ ಗ್ರಾ.ಪಂ ಸದಸ್ಯರಾದ ದೇವೇಂದ್ರ ಕಾಮತ್ ಎಳ್ಳಾರೆ,ದೀಪಾ ಡಿ.ಕಿಣಿ ಉಪಸ್ಥಿತರಿದ್ದರು. ದೀಪಕ್ ಕಾಮತ್ ಎಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ದೇವೇಂದ್ರ ಕಾಮತ್ ಸ್ವಾಗತಿಸಿ, ಸಂತೋಷ್ ಮಡಿವಾಳ ವಂದಿಸಿದರು.WhatsApp Image 2021-09-27 at 12.16.18 PM (1)

By suddi9

Leave a Reply

Your email address will not be published. Required fields are marked *