ಕಾರ್ಕಳ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಕಳ ಪ್ರಖಂಡ ಇದರ ಸಹಯೋಗದಲ್ಲಿ ಹಿಂದೂ ಸಂಗಮ ಕಾರ್ಯಕ್ರಮವು ಕಾರ್ಕಳ ಗಾಂಧಿಮೈದಾನದಲ್ಲಿ ನಡೆಯಿತು. ಅವಧೂತ ವಿನಯ ಗುರೂಜಿ ಮಾತನಾಡಿ, ನಮ್ಮ ಮಕ್ಕಳಲ್ಲಿ ಧರ್ಮ ಶಿಕ್ಷಣದ ಅಗತ್ಯವಿದೆ, ನಾಮಜಪಗಳು,ನಗರಸಂಕೀರ್ತನೆಗಳಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ. ಮನೆಮನೆಗಳಲ್ಲಿ ಭಜನೆ ಸಂಕೀರ್ತನೆ ನಡೆದಾಗ ಸಕಾರಾತ್ಮಕ ಶಕ್ತಿಗಳು ನೆಲೆಯೂರಲು ಸಾಧ್ಯವಿದೆ ಎಂದರು. ಗೋರಕ್ಷಣೆಗೆ ಹೋಗಿ ಕೇಸ್ ಹಾಕಿಸಿಕೊಂಡ ಯುವಕರ ಕೇಸ್ ಗಳನ್ನು ಖುಲಾಸೆಗೊಳಿಸಬೇಕೆಂದು ಆಗ್ರಹಿಸಿದರು.


ಪೇಜಾವರ ಮಠಾಧೀಶರಾದ ವಿಶ್ವೇಶ್ವ ತೀರ್ಥ ಶ್ರೀಪಾದರು ಆಶೀರ್ಚನ ನೀಡಿ, ಸಂಘಟನೆಗಳ ಕಾರ್ಯಕರ್ತರು ಜಾಗೃತರಾಗಿರದಿದ್ದಲ್ಲಿ ಧರ್ಮಕ್ಕೆ ಅಪಾಯವಿದೆ. ಆದ್ದರಿಂದ ಧರ್ಮರಕ್ಷಣೆಗೆ ನಾವೆಲ್ಲರೂ ಕಟಿಬದ್ದರಾಗಬೇಕೆಂದರು.ಇನ್ನು ಸ್ವಾದಿ ಸರಸ್ವತೀ ಅವರು ಮಾತನಾಡಿ, ಮತಾಂತರದ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡುವ ಅನಿವಾರ್ಯತೆಯಿದೆ ಅಲ್ಲದೇ ಹಿಂದೂಪರ ಸರಕಾರವನ್ನು ಚುನಾಯಿಸಬೇಕಿದೆ ಎಂದರು.
ಈ ವೇಳೆ ಕಟಪಾಡಿ ಅನೆಗೊಂದಿ ಮಠದ ಮಠಾಧೀಶರಾದ ಕಾಳಹಸ್ತೇಂದ್ರ ಶ್ರೀ, ವಿಹಿಂಪ ದಕ್ಷಿಣ ಪ್ರಾಂತ ಅಧ್ಯಕ್ಷ ಎಂ ಬಿ ಪುರಾಣಿಕ್, ದಕ್ಷಿಣ ಪ್ರಾಂತದ ಸಂಚಾಲಕ ಸುನಿಲ್ ಕೆ ಆರ್ ,ಬೋಳ ಶ್ರೀನಿವಾಸ ಕಾಮತ್, ವಿಹಿಂಪ ದಕ್ಷಿಣ ಪ್ರಾಂತದ ಸಂಘಟನಾ ಕಾರ್ಯದರ್ಶಿ ಬಸವರಾಜ, ಮಹೇಶ್ ಶೆಟ್ಟಿ ತೆಳ್ಳಾರು, ಸುವೃತ್ ಕುಮಾರ್, ಅಶೋಕ್ ನಾಯಕ್, ಸುಂದರ ಬಿ, ಭಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕ ಸುನಿಲ್ ಕೆ ಅರ್ ,ವಿಭಾಗ ಸಂಚಾಲಕ ಭುಜಂಗ ಕುಲಾಲ್, ವಿ.ಹಿಂ ಪ ಮಾತೃಶಕ್ತಿಯ ಸಂಚಾಲಕಿ ಸುರೇಖಾ ಮೊದಲಾವರು ಉಪಸ್ಥತಿರಿದ್ದರು
