ಅತಿಲೋಕ ಸುಂದರಿ ಶ್ರೀದೇವಿ ಮೂಲಗಳೆಲ್ಲಾ ತಿರುಪತಿಯಲ್ಲೇ ಇವೆ. ಆಕೆ ತಾಯಿ ರಾಜೇಶ್ವರಿ ಸ್ವಂತ ಊರು ತಿರುಪತಿ. ತಾತ ವೆಂಕಟಸ್ವಾಮಿ ರೆಡ್ಡಿ ತಿರುಪತಿ-ಗ್ಯಾರಪಲ್ಲಿ-ಜಮ್ಮುಲ ಮಡುಗು ನಡುವೆ ಬಸ್ಸುಗಳನ್ನು ಓಡಿಸುತ್ತಿದ್ದರು. ಅವರು ಜಮ್ಮಲ ಮಡುಗುವಿನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟ ರತ್ನಮ್ಮನ್ನು ಪ್ರೀತಿಸಿ ಅಂತರ್ಜಾತೀಯ ವಿವಾಹ (ಬಲಿಜ) ಮಾಡಿಕೊಂಡ. ಆ ಬಳಿಕ ಅವರು ರುಯಾ ಆಸ್ಪತ್ರೆಯಲ್ಲಿ ಉದ್ಯೋಗ ಸಂಪಾದಿಸಿದರು. ಅವರಿಗೆ ಇಬ್ಬರು ಗಂಡುಮಕ್ಕಳು, ನಾಲ್ಕು ಮಂದಿ ಹೆಣ್ಣು ಮಕ್ಕಳು. ದೊಡ್ಡ ಮಗ ಬಾಲ ಸುಬ್ರಹ್ಮಣ್ಯಂ, ಬಳಿಕ ರಾಜೇಶ್ವರಿ, ಸುಬ್ಬರಾಮಯ್ಯ, ಅನುಸೂಯಮ್ಮ, ಅಮೃತಮ್ಮ, ಶಾಂತಮ್ಮ ಜನಿಸಿದರು. ಎಲ್ಲರೂ ತಿರುಪತಿಯಲ್ಲಿನ 93-ಟಿಕೆ ಬೀದಿಯಲ್ಲಿನ ಮನೆಯಲ್ಲಿದ್ದರು. ಬಾಲಸುಬ್ರಹ್ಮಣ್ಯಂ ಚೆನ್ನೈನಲ್ಲಿ ಉದ್ಯೋಗ ಸಂಪಾದಿಸಿದ.ಅತಿಲೋಕ ಸುಂದರಿ ಶ್ರೀದೇವಿ ಮೂಲಗಳೆಲ್ಲಾ ತಿರುಪತಿಯಲ್ಲೇ ಇವೆ. ಆಕೆ ತಾಯಿ ರಾಜೇಶ್ವರಿ ಸ್ವಂತ ಊರು ತಿರುಪತಿ. ತಾತ ವೆಂಕಟಸ್ವಾಮಿ ರೆಡ್ಡಿ ತಿರುಪತಿ-ಗ್ಯಾರಪಲ್ಲಿ-ಜಮ್ಮುಲ ಮಡುಗು ನಡುವೆ ಬಸ್ಸುಗಳನ್ನು ಓಡಿಸುತ್ತಿದ್ದರು. ಅವರು ಜಮ್ಮಲ ಮಡುಗುವಿನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟ ರತ್ನಮ್ಮನ್ನು ಪ್ರೀತಿಸಿ ಅಂತರ್ಜಾತೀಯ ವಿವಾಹ (ಬಲಿಜ) ಮಾಡಿಕೊಂಡ. ಆ ಬಳಿಕ ಅವರು ರುಯಾ ಆಸ್ಪತ್ರೆಯಲ್ಲಿ ಉದ್ಯೋಗ ಸಂಪಾದಿಸಿದರು. ಅವರಿಗೆ ಇಬ್ಬರು ಗಂಡುಮಕ್ಕಳು, ನಾಲ್ಕು ಮಂದಿ ಹೆಣ್ಣು ಮಕ್ಕಳು. ದೊಡ್ಡ ಮಗ ಬಾಲ ಸುಬ್ರಹ್ಮಣ್ಯಂ, ಬಳಿಕ ರಾಜೇಶ್ವರಿ, ಸುಬ್ಬರಾಮಯ್ಯ, ಅನುಸೂಯಮ್ಮ, ಅಮೃತಮ್ಮ, ಶಾಂತಮ್ಮ ಜನಿಸಿದರು. ಎಲ್ಲರೂ ತಿರುಪತಿಯಲ್ಲಿನ 93-ಟಿಕೆ ಬೀದಿಯಲ್ಲಿನ ಮನೆಯಲ್ಲಿದ್ದರು. ಬಾಲಸುಬ್ರಹ್ಮಣ್ಯಂ ಚೆನ್ನೈನಲ್ಲಿ ಉದ್ಯೋಗ ಸಂಪಾದಿಸಿದ.
ತನ್ನೊಂದಿಗೆ ತಮ್ಮ, ತಂಗಿಯರನ್ನೂ ಚೆನ್ನೈಗೆ ಕರೆದೊಯ್ದ. ರಾಜೇಶ್ವರಮ್ಮನಿಗೆ ಸಿನಿಮಾ ನಟಿಯಾಗಬೇಕೆಂಬ ಆಸೆ ಇತ್ತು. ಉಳಿದವರೆಲ್ಲಾ ಉದ್ಯೋಗಗಳಲ್ಲಿ ನೆಲೆನಿಂತಿದ್ದರು. ಆಕೆ ನಟಿಯಾಗಿ ಪ್ರಯತ್ನಿಸುತ್ತಾ ರಂಗಾರಾವ್ ಎಂಬ ಅಷ್ಟೇನು ಜನಪ್ರಿಯವಲ್ಲದ ನಟನನ್ನು ಪ್ರೀತಿಸಿ ಮದುವೆಯಾದಳು. ಅವರಿಗೆ ಸೂರ್ಯಕಳಾ ಎಂಬ ಮಗಳು ಜನಿಸಿದಳು. ರಂಗಾರಾವ್ ಹಠಾತ್ ಆಗಿ ಅದೃಶ್ಯನಾದ. ಬಳಿಕ ರಾಜೇಶ್ವರಮ್ಮ ಶಿವಕಾಶಿಯ ತೆಲುಗಿನ ಅಯ್ಯಪ್ಪನ್ ರೆಡ್ಡಿಯನ್ನು ವಿವಾಹವಾದರು. ಸೂರ್ಯಕಳಾರನ್ನು ಅಜ್ಜಿ, ತಾತ ತಂದು ಬೆಳೆಸಿದರು. ಅದಾಗಲೆ ಅಯ್ಯಪ್ಪನ್ ರೆಡ್ಡಿಗೆ ಪತ್ನಿ ಮಗ ಇದ್ದರು. ಅಯ್ಯಪ್ಪನ್ ರೆಡ್ಡಿ ಚೆನ್ನೈ ನ್ಯಾಯವಾದಿಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದರು. ಆತ ತನ್ನ ಪತ್ನಿಯನ್ನು ಒಪ್ಪಿಸಿ ರಾಜೇಶ್ವರಮ್ಮನನ್ನು ವಿವಾಹ ಮಾಡಿಕೊಂಡ.
ರಾಜೇಶ್ವರಮ್ಮನಿಗೆ ಇಬ್ಬರು ಹೆಣ್ಣು ಮಕ್ಕಳು.. ಶ್ರೀದೇವಿ, ಶ್ರೀಲತಾ. ಅಯ್ಯಪ್ಪನ್ ರೆಡ್ಡಿ ಮರಣಿಸಿದ ಬಳಿಕ ಆತನ ಮಗನೇ ಮನೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ. ಶ್ರೀದೇವಿ ದಕ್ಷಿಣ ಭಾರತದಲ್ಲಿ ಮುನ್ನುಗ್ಗುತ್ತಿದ್ದಾಗಲೂ ಅಣ್ಣ ಹೇಳಿದಂತೆ ನಡೆದುಕೊಳ್ಳುತ್ತಿದ್ದರು. ಶ್ರೀಲತಾಳನ್ನು ಮಧುರೈ ಮೂಲದ ಕಾಂಗ್ರೆಸ್ ಎಂಎಲ್ಎ ಸಂಜೀವ್‌ಗೆ ಕೊಟ್ಟು ಮದುವೆ ಮಾಡಿದರು. ಶ್ರೀದೇವಿ ಅಕ್ಕ ಸೂರ್ಯಕಳಾರನ್ನು ರಾಜೇಶ್ವರಮ್ಮ ಸೋದರತ್ತೆ ಕುಟುಂಬದಲ್ಲಿ ಕೊಟ್ಟು ಮದುವೆ ಮಾಡ್ಡಿದರು. ಸೂರ್ಯಕಳಾ ಮಗಳು ಇನ್ನೊಬ್ಬ ಹೀರೋಯಿನ್ ಮಹೇಶ್ವರಿ. ಎ.ರಂಗಂಪೇಟೆಯಲ್ಲಿ 1970ರಲ್ಲಿ ಶ್ರೀದೇವಿ ಹತ್ತು ದಿನಗಳ ಕಾಲ ಕಳೆದರಂತೆ. ಶ್ರೀದೇವಿಯನ್ನು ಹಸುಗೂಸಿನಿಂದ ಚಿಕ್ಕಮ್ಮ ಅನಸೂಯಮ್ಮನೇ ಬೆಳೆಸಿದ್ದರು. ಈಗಾಕೆ ತಿರುಪತಿಯಲ್ಲಿದ್ದಾರೆ.
ಶ್ರೀದೇವಿ ಪ್ರತಿ ವರ್ಷ ಆಗಸ್ಟ್ 13ರಂದು ಹುಟ್ಟುಹಬ್ಬವನ್ನು ತಿರುಮಲ ತಿರುಪತಿ ವೆಂಕಟೇಶ್ವರನ ಸನ್ನಿಧಿಯಲ್ಲಿ ನಡೆಸಿಕೊಳ್ಳುತ್ತಿದ್ದರು. ಶ್ರೀದೇವಿ ಚಿಕ್ಕಮ್ಮನ ಮಗಳು ಪ್ರಸನ್ನ ಲಕ್ಷ್ಮಿ ಸ್ಮಿಮ್ಸ್‌ನಲ್ಲಿ ಅಸಿಸ್ಟೆಂಟ್ ಡೈರೆಕ್ಟರ್. ಶ್ರೀದೇವಿ ತಿರುಪತಿಗೆ ಬಂದರೆ ಅವರ ಮನೆಯಲ್ಲೇ ಇರುತ್ತಿದ್ದರು. ಬೋನಿ ಕಪೂರ್ ಅವರನ್ನು ಶ್ರೀದೇವಿ ವರಿಸಿದ ಬಳಿಕ ಬಂಧುಗಳಲ್ಲಿ ಅಷ್ಟಷ್ಟು ಮಾತ್ರವೇ. ತಾಯಿ ರಾಜೇಶ್ವರಮ್ಮನಿಗೆ ಬ್ರೈನ್ ಅಪರೇಷನ್ ಸಮಯದಲ್ಲಿ ನಡೆದ ಅಚಾತುರ್ಯದ ಕಾರಣ ಅಮೆರಿಕ ಆಸ್ಪತ್ರೆಯಿಂದ ಭಾರಿ ಪರಿಹಾರ ಧನ ಸಿಕ್ಕಿತ್ತು. ಈ ವಿಚಾರವಾಗಿ ಶ್ರೀದೇವಿ, ಶ್ರೀಲತಾ ನಡುವೆ ಮುಸುಕಿನ ಗುದ್ದಾಟ ಇತ್ತು. ಬಳಿಕ ಒಂದಾದರು. ಕಳೆದ ಹತ್ತು ವರ್ಷಗಳಲ್ಲಿ ಮಹೇಶ್ವರಿ ವಿವಾಹದ ಜತೆಗೆ ಒಂದಿಷ್ಟು ಕಾರ್ಯಕ್ರಮಗಳಿಗೆ ಮಾತ್ರ ಶ್ರೀದೇವಿ ಬಂದಿದ್ದಾರೆ.
ತಿರುಪತಿಗೂ ಶ್ರೀದೇವಿಗೂ ಬಿಡಿಸಲಾರದ ಬಂಧ ಇದೆ. ಆಕೆಗೆ ತಿರುಪತಿ ತಿರುಮಲೇಶ ಎಂದರೆ ವಿಪರೀತ ಭಕ್ತಿ. ವರ್ಷಕ್ಕೆ ಒಮ್ಮೆಯಾದರೂ ದೇವರನ್ನು ದರ್ಶಿಸಿಕೊಳ್ಳದೆ ಇರುತ್ತಿರಲಿಲ್ಲ. ತನ್ನ ಹುಟ್ಟುಹಬ್ಬದ ಮೊದಲ ದಿನವಾಗಲಿ, ತನ್ನ ಸಿನಿಮಾ ಬಿಡುಗಡೆಗೆ ಮುನ್ನವಾಗಲಿ, ಯಾವುದಾದರೂ ಮುಖ್ಯವಾದ ಕೆಲಸ ಆರಂಭಿಸುವ ಮೊದಲು ತಿರುಮಲ ಶ್ರೀವಾರಿ ಬಳಿಗೆ ಬಂದು ದರ್ಶನ ಭಾಗ್ಯ ಪಡೆಯುತ್ತಿದ್ದರು. ಶ್ರೀದೇವಿಗೆ ಸುಪ್ರಭಾತ ಸೇವೆ ಎಂದರೆ ತುಂಬಾ ಇಷ್ಟವಂತೆ. ಕಳೆದ ವರ್ಷ ಜೂನ್ 24ರಂದು ದೇವರ ದರ್ಶನ ಪಡೆದಿದ್ದರು. ಮಾಮ್ ಚಿತ್ರ ಜುಲೈ 7ರಂದು ಬಿಡುಗಡೆಯಾದ ಕಾರಣ ಅದಕ್ಕೂ ಕೆಲವು ದಿನಗಳ ಮೊದಲು (ಜೂನ್ 24) ತಿರುಮಲಕ್ಕೆ ಬಂದು ಸ್ವಾಮಿಯ ದರ್ಶನ ಪಡೆದಿದ್ದರು. ಇದೇ ಅವರ ಕೊನೆಯ ದರ್ಶನ.

