Water_Plan

ಶರೀರದಲ್ಲಿನ ವಿಷ ಪದಾರ್ಥಗಳನ್ನು ಹೊರಹಾಕಬೇಕೆಂದರೂ, ತಿಂದ ಆಹಾರ ಸರಿಯಾಗಿ ಜೀರ್ಣವಾಗಬೇಕೆಂದರೂ, ಶರೀರದಲ್ಲಿನ ವಿವಿಧ ಜೀವಕ್ರಿಯೆಗಳು ಸರಾಗವಾಗಿ ನಡೆಯಬೇಕೆಂದರೆ ನಾವು ನಿತ್ಯ ಕುಡಿಯುವ ನೀರಿನ ಪ್ರಮಾಣ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ನೀರನ್ನು ಸರಿಯಾಗಿ ಕುಡಿಯದಿದ್ದರೆ ಕಾಯಿಲೆಗೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ಎಷ್ಟು ತೂಕ ಇರುವ ವ್ಯಕ್ತಿ ಎಷ್ಟು ನೀರು ಕುಡಿಯಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

  • 45 ಕೆ.ಜಿ ತೂಕ ಇರುವವರು ಪ್ರತಿ ನಿತ್ಯ ಕನಿಷ್ಠ  1.9 ಲೀಟರ್ ನೀರು ಕುಡಿಯಬೇಕು.
  • ಅದೇ 50 ಕೆ.ಜಿ ತೂಕ ಇರುವವರು 2.1ಲೀಟರ್ ನೀರು ಕುಡಿಯಬೇಕು.
  • 55  ಕೆ.ಜಿ ತೂಕ ಇರುವವರು ಪ್ರತಿ ನಿತ್ಯ 2.3 ಲೀಟರ್, 60 ಕೆ.ಜಿ ತೂಕ ಇರುವವರು 2.5 ಲೀಟರ್ ನೀರು ಕುಡಿಯಬೇಕು.
  • 65  ಕೆ.ಜಿ ತೂಕ ಇರುವವರು 2.7 ಲೀಟರ್, 70  ಕೆ.ಜಿ ತೂಕ ಇರುವವರು 2.9 ಲೀಟರ್ ನೀರು ಕುಡಿಯಬೇಕು.
  • 75 ಕೆ.ಜಿ ತೂಕ ಇರುವವರು ಪ್ರತಿ ನಿತ್ಯ 3.2 ಲೀಟರ್, 80 ಕೆ.ಜಿ ತೂಕ ಇರುವವರು 3.5 ಲೀಟರ್ ನೀರು ಕುಡಿಯಬೇಕು.
  • 85  ಕೆ.ಜಿ ತೂಕ ಇರುವವರು  3.7 ಲೀಟರ್ 90  ಕೆ.ಜಿ ತೂಕ ಇರುವವರು 3.9 ಲೀಟರ್ ನೀರು ಕುಡಿಯಬೇಕು.
  • 95 ಕೆ.ಜಿ ತೂಕ ಇರುವವರು ನಿತ್ಯ 4.1 ಲೀಟರ್ ನೀರು ಕುಡಿಯಬೇಕು.
  • ಅದೇ 100 ಕೆ.ಜಿ ಗಿಂತ ಹೆಚ್ಚು ತೂಕ ಇರುವವರು 4.3 ರಿಂದ 5 ಲೀಟರ್ ನೀರು ಕುಡಿಯಬೇಕು.
  • ಮೇಲೆ ನೀಡಿದ ರೀತಿಯಲ್ಲಿ ಆಯಾ ತೂಕದ ವ್ಯಕಿಗಳು ಅದಕ್ಕೆ ತಕ್ಕಂತೆ ನೀರನ್ನು ಕುಡಿದರೆ ಆರೋಗ್ಯವಾಗಿರಬಹುದು.

By suddi9

Leave a Reply

Your email address will not be published. Required fields are marked *