1c201f1ec79008eb9cfc590df2664aad50b5f836

ಕೇಂದ್ರ ಸರ್ಕಾರ ನೌಕರರ ಕೆಲಸವನ್ನು ಸುಲಭ ಮಾಡಿದೆ. ನೌಕರರ ಪ್ರಾವಿಡೆಂಟ್ ಫಂಡ್ ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡಲು ಉಮಂಗ್ ಆಯಪ್ ನಲ್ಲಿ ಅವಕಾಶ ನೀಡಿದೆ. ಉಮಂಗ್ ಆಯಪ್ ಮೂಲಕ ನೀವು ಪಿಎಫ್ ಖಾತೆಯನ್ನು ಆಧಾರ್ ಜೊತೆ ಸುಲಭವಾಗಿ ಲಿಂಕ್ ಮಾಡಬಹುದಾಗಿದೆ.

ಇದು ನೌಕರರ ಪ್ರಾವಿಡೆಂಟ್ ಫಂಡ್ ಸಂಸ್ಥೆ (ಇಪಿಎಫ್‌ಒ) ವೆಬ್ಸೈಟ್ ನ ಹೊಸ ಸೌಲಭ್ಯವಾಗಿದೆ. ಕಾರ್ಮಿಕ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದೆ. ಡಿಜಿಟಲ್ ಇಂಡಿಯಾದ ಇನ್ನೊಂದು ಹೆಜ್ಜೆಯಿದು ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ. ಈ ಸೌಲಭ್ಯ ಇಪಿಎಫ್‌ಒ ಪೋರ್ಟಲ್ ನಲ್ಲಿ ನೋಂದಾಯಿಸಿದ ನೌಕರರಿಗೆ ಸಿಗಲಿದೆ.

ಎಲ್ಲಾ ಸರ್ಕಾರಿ ಸೇವೆಗಳನ್ನು ಒಂದೇ ಸ್ಥಳದಲ್ಲಿ ನೀಡುವ ಉದ್ದೇಶದಿಂದ ಸರ್ಕಾರ ಉಮಂಗ್ ಮೊಬೈಲ್ ಅಪ್ಲಿಕೇಷನ್ ಶುರು ಮಾಡಿದೆ. ಜಾಗತಿಕ ಸೈಬರ್ ಬಾಹ್ಯಾಕಾಶ ಸಮಾವೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಆಯಪ್ ಬಿಡುಗಡೆ ಮಾಡಿದ್ದಾರೆ.

By suddi9

Leave a Reply

Your email address will not be published. Required fields are marked *