ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ನಿರ್ದೇಶಕ ಸೂರಿ ವಿರುದ್ಧ ಹುಚ್ಚ ವೆಂಕಟ್ ಕಿಡಿಕಾರಿದ್ದಾರೆ.
ಸಿನಿಮಾದಲ್ಲಿ ವಿಲನ್ ಗಳು ನಾಯಕ ನಟ ಶಿವರಾಜ್ ಕುಮಾರ್ ಅವರಿಗೆ ಅವಾಚ್ಯ ಪದಗಳಿಂದ ಬೈಯುವ ಸನ್ನಿವೇಶಗಳಿವೆ. ಇದರಿಂದ ಶಿವಣ್ಣ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದೀಗ ಹುಚ್ಚ ವೆಂಕಟ್ ಕೂಡಾ ರೊಚ್ಚಿಗೆದ್ದಿದ್ದಾರೆ. ವಿಲನ್ ಗಳು ಶಿವಣ್ಣನಿಗೆ ಹೇಳಿದ ಡೈಲಾಗ್ ಕೇಳಿ ಹುಚ್ಚ ವೆಂಕಟ್ ನಿರ್ದೇಶಕ ಸೂರಿ ಅವರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಚಿತ್ರದಲ್ಲಿ ಶಿವಣ್ಣನಿಗೆ ಉಪಯೋಗಿಸಿದ ಅವಾಚ್ಯ ಪದಗಳನ್ನು ಮ್ಯೂಟ್ ಮಾಡಬೇಕು. ಇಲ್ಲದಿದ್ದರೆ. ನನ್ನ ಹುಡುಗರು ನಿನ್ನನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

