ಮಂಗಳೂರು: ಮಂಗಳೂರಿನ ಪ್ರಸಿದ್ಧ ಉರ್ವ ದೇರೆಬೈಲು ತಂತ್ರಿ ಹಿರಿಯರಾದ ಬ್ರಹ್ಮಶ್ರೀ ವಿದ್ವಾನ್ ದೇರೆಬೈಲು ಹರಿಕೃಷ್ಣ ತಂತ್ರಿ(79) ಸೋಮವಾರ ಮಣಿಪಾಲ ಆಸ್ಪತ್ರಯಲ್ಲಿ ನಿಧನರಾದರು.
ಉರ್ವ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಧರ್ಮದರ್ಶಿಗಳಾದ ಅವರು ಕಾಸರಗೋಡಿನ ಮಧೂರು ಮಹಾಗಣಪತಿ ಸಹಿತ ನೂರಾರು ದೇವಸ್ಥಾನಗಳಲ್ಲಿ ಪ್ರಧಾನ ತಂತ್ರಿಗಳಾಗಿ ಸೇವೆ ಸಲ್ಲಿಸಿದ್ದರು. ಉಡುಪಿ ಸಂಸ್ಕøತ ಕಾಲೇಜಿನಲ್ಲಿ ಅಲಂಕಾರ ಶಾಸ್ತ್ರ ಪ್ರಾಧ್ಯಾಪಕರಾಗಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸೋಮವಾರ ಬೆಳಗ್ಗೆ ಕಡಿಯಾಳಿ ಸ್ವಗ್ರಹದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಿತು. ಅವರಿಗೆ ಪುತ್ರರಾದ ಉಡುಪಿ ಸಂಸ್ಕೃತ ಕಾಲೇಜಿನ ಜ್ಯೋತಿಷ್ಯ ಶಾಸ್ತ್ರ ಸಹ ಪ್ರಾಧ್ಯಾಪಕ ಶಿವಪ್ರಸಾದ್ ತಂತ್ರಿ , ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ.ಗುರುರಾಜ್ ತಂತ್ರಿ ಹಾಗೂ ಪುತ್ರಿ ಇದ್ದಾರೆ.
