ಬಡಗಬೆಳ್ಳೂರು : ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕಿರಳೆ ಅಪ್ಪಿ ಪೂಜಾರ್ತಿ( 87) ವೃದ್ಧಾಪ್ಯದಿಂದ ಕಿರಳೆ ಸ್ವಗೃಹದಲ್ಲಿ ಜು.6ರಂದು ಸೋಮವಾರ ನಿಧನಹೊಂದಿದರು.

ಮೃತರು ಮೂವರು ಹೆಣ್ಣು ಮಕ್ಕಳು ಹಾಗೂ ಅಳಿಯಂದಿರು ಒರ್ವ ಪುತ್ರ ಸೊಸೆ ಹಾಗೂ ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆಯು ಮಂಗಳವಾರ ಬಡಗಬೆಳ್ಳೂರು ಹಿಂದೂರುದ್ರ ಭೂಮಿಯಲ್ಲಿ ನಡೆಯಿತು.
