ಗುರುಪುರ : ಗುರುಪುರ ಗ್ರಾಮ ಪಂಚಾಯತ್ ಮತ್ತು ಮಂಡಲ ಪಂಚಾಯತ್ ಅಧ್ಯಕ್ಷರಾಗಿದ್ದ ಹಾಜಿ ದಿ. ಟಿ. ಹುಸೇನ್ ಅವರ ಪುತ್ರ, ಗುರುಪುರ ಗ್ರಾಪಂ ಮಾಜಿ ಸದಸ್ಯ, ಪಿಎಲ್ ಡಿ ಮಾಜಿ ನಿರ್ದೇಶಕರಾಗಿದ್ದ ಅಡ್ಡೂರು ಕಾಂಜಿಲಕೋಡಿ ನಿವಾಸಿ ಟಿ. ಹನೀಫ್(೬೪) ಅವರು ಕಳೆದ ರಾತ್ರಿ(ಜೂನ್. ೩೦) ಹೃದಯಾಘಾತದಿಂದ ನಿಧನ ಹೊಂದಿದರು.

ಪರಿಸರದ ಮೇಲೆ ಅತೀವ ಕಾಳಜಿ ಹೊಂದಿದ್ದು, ಸಮಾಜಸೇವೆಗೆ ಆದ್ಯತೆ ನೀಡಿದ್ದ ಇವರು ಪಂಚಾಯತ್‌ನಲ್ಲಿ ಜನಸಾಮಾನ್ಯರ ಧ್ವನಿಯಾಗಿದ್ದರು. ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮಾಜಿ ಸಚಿವ ರಮಾನಾಥ ರೈ ಸಹಿತ ಪಕ್ಷದ ಅನೇಕ ಹಿರಿಯ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.

By Suddi9

Leave a Reply

Your email address will not be published. Required fields are marked *