e70bf57e-13e4-4a00-a9b3-9a1797f274e3

ಮುಂಬಯಿ: ಬಾಲಿವುಡ್​ನ ಹಿರಿಯ ನಟಿ ಶ್ರೀದೇವಿ ಹೃದಯಾಘಾತದಿಂದ ಶನಿವಾರ ತಡರಾತ್ರಿ ದುಬೈನಲ್ಲಿ  ಮೃತಪಟ್ಟಿದ್ದಾರೆ.

 54 ವರ್ಷದ ಬಹುಭಾಷಾ ನಟಿ ಶ್ರೀದೇವಿ, ತಮ್ಮ ಸಂಬಂಧಿಕರೊಬ್ಬರ ವಿವಾಹ ಸಮಾರಂಭದಲ್ಲಿ ಪಾಲ್ಗೋಳ್ಳಲು ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಮತ್ತು ಕಿರಿಯ ಮಗಳು ಖುಷಿ ಜೊತೆ ದುಬೈಗೆ ತೆರಳಿದ್ದರು. ಈ ವೇಳೆ ಮೃತಪಟ್ಟಿದ್ದಾರೆ.

 ಸುದ್ದಿ ತಿಳಿಯುತ್ತಿದ್ದಂತೆ ಬಾಲಿವುಡ್​ನ ಖ್ಯಾತ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ. 1978ರಲ್ಲಿ ಸೊಲ್ವ ಸಾವನ್ ಸಿನಿಮಾ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಶ್ರೀದೇವಿ ಸುಮಾರು 215 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

 ವಿಷಯ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಮುಂಬೈನ ಅಂಧೇರಿಯಲ್ಲಿರುವ ಶ್ರೀದೇವಿ ಅವರ ನಿವಾಸದೆದರು ನೆರೆಯುತ್ತಿದ್ದಾರೆ.

ರಾತ್ರಿ 11.30 ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿರುವ ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ತರಲಾಗುವುದು.

By suddi9

Leave a Reply

Your email address will not be published. Required fields are marked *