ಪೊಳಲಿ : ಕಳೆದ ಒಂದು ತಿಂಗಳಿಂದ ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೊಳಲಿ ನಿವಾಸಿ ಚಂದ್ರಹಾಸ ದೇವಾಡಿಗ(58) ಶುಕ್ರವಾರ ನಿಧನ ಹೊಂದಿದರು.
ಇವರು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ 37 ವರ್ಷ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ ಹಾಗೂ ಇ ಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಚಂದ್ರಹಾಸ ನಿಧನಕ್ಕೆ ಪೊಳಲಿ ದೇವಸ್ಥಾನದ ಆಡಳಿತ ಮಂಡಳಿ , ಕಾರ್ಯನಿರ್ವಹಣಾಧಿಕಾರಿ ಸಂತಾಪ ವ್ಯಕ್ತಪಡಿಸಿದೆ.
