ಕಲ್ಲಡ್ಕ: ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಸಂಸ್ಕಾರಗಳು ಜೀವನಕ್ಕೆ ಮೌಲ್ಯಗಳನ್ನು ನೀಡುತ್ತದೆ. ಬುದ್ಧಿವಂತಿಕೆಯ ಜೊತೆಗೆ ಸಾಂಸ್ಕøತಿಕ, ಭಾವನಾತ್ಮಕ ,ಆಧ್ಯಾತ್ಮಿಕ ಅಂಶಗಳಿದ್ದಾಗ ಶಿಕ್ಷಣವು ಪರಿಪೂರ್ಣವಾಗುತ್ತದೆ ಹಾಗೂ ವೃತ್ತಿ ಧರ್ಮದ ಕುರಿತಾಗಿ ಹೇಳುತ್ತಾ ಉತ್ತಮ ಬದುಕಿನ ದಾರಿಯನ್ನು ವಿಶ್ಲೇಷಿಸುತ್ತ ಯೋಗದ ಮಹತ್ವವೆನೆಂಬುದನ್ನು ಹಿರಿಯ ಮಾರ್ಗದರ್ಶಕರಾದ ಡಾ|| ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷರು ವಿವೇಕಾನಂದರ ವಿದ್ಯಾವರ್ಧಕ ಸಂಘ ಪುತ್ತೂರು ಇವರು ಮಾರ್ಗದರ್ಶನ ಮಾಡಿದರು.ಅವರು ಬುಧವಾರ ಪದವಿಪೂರ್ವ ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಆಗತ-ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೂತನವಾಗಿ ದಾಖಲಾತಿಗೊಂಡ ವಿದ್ಯಾರ್ಥಿಗಳು ಹೋಮ ಕುಂಡಕ್ಕೆ ಹವಿಸ್ಸು ಅರ್ಪಿಸಿ ಭಾರತಮಾತೆಗೆ ಪುಷ್ಪಾರ್ಚನೆಗೈದರು. ವೇದಿಕೆಯಲ್ಲಿದ್ದ ಹಿರಿಯರು ವಿದ್ಯಾರ್ಥಿಗಳಿಗೆ ತಿಲಕವಿಟ್ಟು ಆರ್ಶೀವದಿಸಿದರು.
ವೇದಿಕೆಯಲ್ಲಿ ರೂಪಲೇಖ ಪಾಣಾಜೆ ಅಧ್ಯಕ್ಷರು ನರೇಂದ್ರ ಪಿ ಯು ಕಾಲೇಜ್ ತೆಂಕಿಲ ಪುತ್ತೂರು. ರವಿ ಪೂಜಾರಿ ಮಂಗಳೂರು , ಗಣೇಶ್‍ರಾವ್ ಮಂಗಳೂರು, ಮುರಳಿಧರ ಕೆದಿಲ, ಸತೀಶ್ ಕುಲಕರ್ಣೀ ಮುಂಬಯಿ, ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತಮಾಧವ, ಡಾ| ಕಮಲಾ ಪ್ರಭಾಕರ ಭಟ್, ನಾಗೇಶ್ ಕಲ್ಲಡ್ಕ ಆಡಳಿತ ಮಂಡಳಿಯ ಸದಸ್ಯರು, ಹಾಗೂ ಪ್ರಾಂಶುಪಾಲರಾದ ವಸಂತ ಬಲ್ಲಾಳ್ ಉಪಸ್ಥಿತರಿದ್ದರು.
