ಪೊಳಲಿ : ಶ್ರೀ ದುರ್ಗರಾಜರಾಜೇಶ್ವರಿ ದೇವಸ್ಥಾನದ ದಿವ್ಯ ಸನ್ನಿಧಿಯಲ್ಲಿ ಜಿರ್ಣೊದ್ಧಾರ ಕಾರ್ಯಗಳು ಸಾಂಗವಾಗಿ ನೆರವೇರುವ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಊರವರ ಸಮ್ಮುಖದಲ್ಲಿ ತಾಂಬೂಲ ಪ್ರಶ್ನೆಯನ್ನು ಇರಿಸಲಾಯ್ತು.
ಪ್ರಶ್ನೆಯಲ್ಲಿ ಕಂಡುಬಂದಂತೆ ದೇವಾಲಯದ ಕೆಲಸಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿದ್ದು ಅದಕ್ಕೆ ಮೂಲ ಕಾರಣವೆಂಬಂತೆ ದೇವಾಲಯದಲ್ಲಿ ನಡೆಯುವ ಕೆಲವು ಕಾರ್ಯಗಳು ದೇವರಿಗೆ ಅಪ್ರಿಯವಾದಂತೆ ಕಂಡುಬಂದಿದ್ದು ಆ ಪ್ರಯುಕ್ತ ಕೆಲ ಪ್ರಾಯುಶ್ಚಿತಾದಿ ಕಾರ್ಯಗಳನ್ನು ನಡೆಸಬೇಕೆಂದು ಮತ್ತು ದೇವಸ್ಥಾನದ ಕೆಲಸಗಳನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ತಿಳಿಸಲಾಯ್ತು. ಇ ಸಂದರ್ಭದಲ್ಲಿ ದೇವಾಲಯದ ಆಡಳಿತ ವರ್ಗ, ಆರ್ಚಕ ವೃಂದ,ಶಾಸಕರು,ಸಚಿವರುಗಳು, ಮಾನ್ಯ ಸಂಸದರು ,ಮಾಜಿ ಶಾಸಕರುಗಳು, ತಂತ್ರಿ ವರ್ಗ ಹಾಗೂ ಸಾವಿರ ಸೀಮೆಯ ಭಕ್ತಾದಿಗಳು ಹಾಜರಿದ್ದರು.

