ಪೊಳಲಿ: ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು, ಕೂರಿಯಾಳ, ಅಮ್ಮುಂಜೆ ಇದರ ಬಂಟರ ಸಂಘ ಬೆಳ್ಳೂರು ವಲಯದ “ಮರಿಯಲದ ಪೊರ್ಲು ಮರ್ಲ್”ಜು.26 ರಂದು ಭಾನುವಾರ ಬೆಳಗ್ಗೆ 9.30ಕ್ಕೆ ಚಂದ್ರತೋಟ ಕೂರಿಯಾಳಪಡು ವಿನಲ್ಲಿ ನಡೆಯಲಿದೆ.

ಬೆಳ್ಳೂರು ವಲಯ ಯುವ ಬಂಟ ಭಾಂದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು , ವಿದ್ಯಾರ್ಥಿ ವೇತನ ವಿತರಣೆ ಬೆಳ್ಳೂರು ವಲಯದ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಜನಾರ್ದನ ಶೆಟ್ಟಿ ದಂಪತಿಗಳಿಗೆ ಪ್ರೀತಿಯ ಸನ್ಮಾನ ನಡೆಯಲಿದೆ.
ನಂತರ ಸಭಾ ಕಾರ್ಯಕ್ರಮ ,ಬೆಳ್ಳೂರು ವಲಯದ ಬಂಟ ಭಾಂದವರು ಮನೆಯಲ್ಲಿ ತಯಾರಿಸಿದ ವಿಶೇಷ ಖಾದ್ಯಗಳ ಭೋಜನ , ಆಟೋಟ ಸ್ಪರ್ಧೆಗಳು ನಡೆದ ಬಳಿಕ ಸಮಾರೋಪ ಸಮಾರಂಭ ಜರಗಲಿದೆ .
ಸಭಾ ಕಾರ್ಯಕ್ರಮದಲ್ಲಿ ಪೊಳಲಿ ರಾಮಕೃಷ್ಣ ಮಠದ ಸ್ವಾಮಿ ವಿವೇಕಚೈತನ್ಯಾನಂದ ಆಶೀರ್ವಚನ ನೀಡಲಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ದೀಪ ಪ್ರಜ್ವಲಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಸುಜಾತ ಪಿ. ರೈ ಕಲ್ಲಡ್ಕ , ಗೋಕುಲ್ ದಾಸ್ ಭಂಡಾರಿ ಬಿಜಂದರ್ ಗುತ್ತು, ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತುಆಡಳಿತ ಮೊಕ್ತಸರರು ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿ , ದೇವದಾಸ ಹೆಗ್ಡೆ ಅಮ್ಮುಂಜೆಗುತ್ತುನಿರ್ದೇಶಕರು, ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯ ಅಡ್ಯಾರು ಮಂಗಳೂರು,
ಚಂದ್ರಶೇಖರ ಭಂಡಾರಿ ಕಲಾಯಿ ಅಧ್ಯಕ್ಷರು, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್, ಚಂದ್ರಹಾಸ ಡಿ. ಶೆಟ್ಟಿ, ರಂಗೋಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಕಾರ್ಯದರ್ಶೀ , ಡಾ|| ಚಿತ್ತರಂಜನ್ ರೈ MSc, PHD ಉಡುಪಿ,ನಿವೃತ್ತ ಪ್ರಿನ್ಸಿಪಾಲರು, ಕಲ್ಪತರು ಪ್ರದ.ವಿಜ್ಞಾನ ಕಾಲೇಜು ತಿಪಟೂರು,
ಐತಪ್ಪ ಆಳ್ವ ಸುಜೀರುಗುತ್ತು, ಉಪಾಧ್ಯಕ್ಷರು, ಬಂಟರ ಸಂಘ ಬಂಟ್ವಾಳ, ಸದಾನಂದ ಆಳ್ವ ಕಂಪ, ಕಾರ್ಯದರ್ಶಿ, ಬಂಟರ ಸಂಘ ಬಂಟ್ವಾಳ, ಲೋಕೇಶ್ ಶೆಟ್ಟಿ ಕುಳ ಕೋಶಾಧಿಕಾರಿ ಬಂಟರ ಸಂಘ ಬಂಟ್ವಾಳ,
ಶ್ರೀವಿದ್ಯಾ ಎ. ರೈ, ಜತೆ ಕೋಶಾಧಿಕಾರಿ ಬಂಟರ ಸಂಘ ಬಂಟ್ವಾಳ, ಸಂತೋಷ್ ಆಳ್ವ, ಕೂರಿಯಾಳಗುತ್ತು ಉದ್ಯಮಿ.,
ಧನಂಜಯ್ ರೈ, ಉದ್ಯಮಿ ಬೆಂಗಳೂರು ನಂದಾರಾಮ ರೈ ಅಂಬೋಡಿಮಾರು, ನಿರ್ದೇಶಕರು, ಕೆ.ಎಂ.ಎಫ್. ಮಂಗಳೂರು, ಸವಿತಾ ಎನ್. ಶೆಟ್ಟಿ ಪರಿದೊಗರು, ನಿರ್ದೇಶಕರು, ಕೆ.ಎಂ.ಎಫ್. ಮಂಗಳೂರು ,ನಿರಂಜನ್ದಾಸ್ ಭಂಡಾರಿ, ಕಮ್ಮಾಜೆ, ಮಲ್ಲಿಕಾ ವಿ. ಶೆಟ್ಟಿ, ಕೂರಿಯಾಳಪಡು, ಅಧ್ಯಕ್ಷರು, ವ್ಯ.ಸೇ.ಸ.ಬ್ಯಾಂಕ್ ಅಮ್ಮಾಡಿ, ಕೃಷ್ಣಪ್ರಸಾದ್ ರೈ ಬೆಳ್ಳೂರುಗುತ್ತು, ರತ್ನಾಕರ ಶೆಟ್ಟಿ ಯಜಮಾನ ಮುಂಡಡ್ಕಗುತ್ತು ಗೌರವ ಅಧ್ಯಕ್ಷರು, ಚಂದ್ರಹಾಸ ಶೆಟ್ಟಿ ಭಂಡಾರಮನೆ ಕಾಂಬೋಡಿ , ನಳಿನಿ ಬಿ ಶೆಟ್ಟಿ ಕಡು ಕೊರಿಯಾಳ ಉಪಾಧ್ಯಕ್ಷರು, ಸೂರ್ಯಕಾಂತ ಶೆಟ್ಟಿ ಕಟ್ಟೆಮಾರು, ದೇವಿಪ್ರಸಾದ್ ಚೌಟ ಕುಂಡಬೆಟ್ಟು, ಕರುಣಾಕರ ಶೆಟ್ಟಿ ಗುಂಡಾಲಗುತ್ತು, ಕಾರ್ತಿಕ್ ಬಳ್ಳಾಲ್,
ಶಾಂತಿ ಶೆಟ್ಟಿ ಪಲ್ಲಿಪಾಡಿ , ಸವಿತಾ ಎಸ್. ಗಾಂಭೀರ್ , ರಿತೇಶ್ ಶೆಟ್ಟಿ ಗುಂಡಾಲಗುತ್ತು ಮುಂತಾದವರು ಭಾಗವಹಿಸಲಿದ್ದಾರೆ ಎಂದು ಬೆಳ್ಳೂರು ವಲಯದ ಬಂಟರ ಸಂಘದ ಅಧ್ಯಕ್ಷ ರಾಧಾಕೃಷ್ಣ ರೈ ಪೊಳಲಿ ತಿಳಿಸಿದ್ದಾರೆ.
