ನ.೨೬ರಂದು ಸಂವಿಧಾನ ದಿನಾಚರಣೆ, ಸಾಮೂಹಿಕ ಹುಟ್ಟುಹಬ್ಬ ಆಚರಣೆ
ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದ ಮಧುಕರ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾಕೇಂದ್ರದ ಕೋಶಾಧಿಕಾರಿ ಹಾಗೂ ನ್ಯಾಯವಾದಿಯಾಗಿರುವ ಶಿವಗಿರಿ ಸತೀಶ್ ಭಟ್ ಮಾತನಾಡಿ “ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು, ಅತ್ಯಂತ ಶ್ರೇಷ್ಠ ಪ್ರಜೆಗಳಾದ ನಾವು ಸಂವಿಧಾನಕ್ಕೆ ಬದ್ಧವಾಗಿ ನಡೆಯಬೇಕು” ಎಂದರು.
ಕಾರ್ಯಕ್ರಮವು ಸಾಮೂಹಿಕ ಭಜನೆಯ ಮೂಲಕ ಆರಂಭಗೊoಡಿತು. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ,ಅತಿಥಿಗಳಿಂದ ತಿಲಕಧಾರಣೆ ಮಾಡಿದರು. ಪ್ರಾಥಮಿಕ ಶಾಲೆಯ ಪ್ರೀತಾ ಮಾತಾಜಿ ಇವರು ಮಾತನಾಡಿ “ನಾವು ಹುಟ್ಟುಹಬ್ಬ ದಿನ ಮಾಡಿದ ಒಳ್ಳೆಯ ಕೆಲಸವನ್ನು ಸ್ಮರಿಸಿಕೊಳ್ಳಬೇಕು ಅಲ್ಲದೆ ನಾವು ಹುಟ್ಟು ಹಬ್ಬದ ದಿನದಂದು ಒoದೊoದು ಗಿಡವನ್ನು ನೆಡುವ ಮೂಲಕ ಪ್ರಾಕೃತಿಕ ವಿಕೋಪಗಳನ್ನು ತಡೆಗಟ್ಟಬೇಕು” ಎಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅತಿಥಿ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಇಲ್ಲಿನ ಸಹ ಪ್ರಾಧ್ಯಾಪಕರಾದ ರಾಜೀವಿ ಇವರು “ಮನುಷ್ಯ ಜನ್ಮ ಎಲ್ಲಕ್ಕಿಂತಲೂ ಶ್ರೇಷ್ಠ ಇಂತಹ ಪವಿತ್ರಜನ್ಮದಲ್ಲಿ ಹುಟ್ಟಿದ ನಾವೇ ಪುಣ್ಯವಂತರು” ಎನ್ನುತ್ತಾ ವಿದ್ಯಾಕೇಂದ್ರದ ಸಂಸ್ಕಾರಯುತ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಕರ‍್ಯಕ್ರಮದಲ್ಲಿ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ದಯಾನoದ ಗೋಳ್ತಮಜಲು, ವಿದ್ಯಾಕೇಂದ್ರದ ಸಹಸಂಚಾಲಕರಾದ ರಮೇಶ್ ಎನ್, ಪ್ರೌಢಶಾಲೆಯ ಆಡಳಿತ ಅಧಿಕಾರಿ ಶಾಂಭವಿ ಎ. ಮುಖ್ಯೋಪಾಧ್ಯಾಯರಾದ ಗೋಪಾಲ ಎಂ.ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಭೂಷಣ್ ಕಾರ‍್ಯಕ್ರಮವನ್ನು ನಿರೂಪಿಸಿ, ಚಿನ್ಮಯ್ ಸ್ವಾಗತಿಸಿ ಅಕ್ಷತಾ ಲಕ್ಷ್ಮಿ ಧನ್ಯವಾದ ಮಾಡಿದರು