Published On: Fri, Nov 11th, 2022

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಕ ಜಯಂತಿ


ಕಲ್ಲಡ್ಕ: ವೇದವ್ಯಾಸ ಧ್ಯಾನ ಮಂದಿರದಲ್ಲಿ ಕನಕ ದಾಸ ಜಯಂತಿಯನ್ನು ಆಚರಿಸಲಾಯಿತು. ಜೊತೆಗೆ ಜೀವನಚರಿತ್ರೆಯ ಕಿರುಚಿತ್ರವನ್ನು ತೋರಿಸಲಾಯಿತು. ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಪ್ರತೀಕ್ಷಾ ಶೆಟ್ಟಿ, ಮಾತನಾಡುತ್ತಾ “ಶ್ರೀನಿವಾಸ ದೇವರ ಹರಕೆಯಿಂದ ಹುಟ್ಟಿದಕಾರಣತಿಮ್ಮಪ್ಪ ನಾಯಕನೆಂಬ ಹೆಸರಿಟ್ಟರು. ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲಿ ಪತ್ತೆಯಾದ್ಲ ಸಂಪತ್ತನ್ನುಊರಿನವರಿಗೆ ಹಂಚಿರುವುದರಿಂದ ಅವರಿಗೆ ಕನಕದಾಸ ಎಂಬ ಬಿರುದು ಬಂತು. ಯಾರು ಮೋಕ್ಷದದಾರಿಗೆ ಹೋಗುತ್ತಾರೆ?ಎಂಬ ಪ್ರಶ್ನೆಗೆ“ನಾ ಹೋದರೆ ಹೋದೆನು’ ಎಂಬ ಉತ್ತರವನ್ನು ನೀಡಿದರು.

ಅಂದರೆ ನಾನು ಎಂಬ ಅಹಂವನ್ನು ಬಿಟ್ಟರೆ ಮೋಕ್ಷದದಾರಿಗೆ ಹೋಗಬಹುದು ಎಂದು ತಾರ್ಕಿಕವಾಗಿ ಹೇಳಿದರು. ಉಡುಪಿಯ ಶ್ರೀಕೃಷ್ಣನ ದೇವಾಲಯದಲ್ಲಿ ದಾಸ್ಯಕ್ಕೆ ಒಳಗಾದ ದಾಸರಿಗೆ ಕಿಂಡಿಯ ಮೂಲಕ ದರ್ಶನಕೊಟ್ಟು ಕನಕನ ಕಿಂಡಿ ಎಂದು ಇಂದಿಗೂ ಪ್ರಸಿದ್ಧಿ ಪಡೆದಿದೆ.

ಕನಕದಾಸರು ಹಲವಾರು ಕೀರ್ತನೆಗಳನ್ನು ರಚಿಸಿದ್ದು ಈಗಲೂ ಪ್ರಸಿದ್ಧಿ ಪಡೆದಿದೆ. ಕನಕದಾಸರು ತನ್ನ ಕೊನೆಯ ದಿನಗಳನ್ನು ಕಾಗಿನೆಲೆ ಆದಿಕೇಸವನ ಸನ್ನಿಧಾನದಲ್ಲಿ ಕಳೆಯುತ್ತಾ ಕೇಶವನಲ್ಲಿ ಲೀನಲಾಗುತ್ತಾನೆ” ಎಂದು ಕನಕ ದಾಸರ ಹುಟ್ಟು, ತಿಮ್ಮಪ್ಪ ನಾಯಕ ಕನಕದಾಸರಾದ ಕತೆ ನಂತರ ಪ್ರಾಂಪಚಿಕ ಜೀವನ ತೊರೆದು ಆಧ್ಯಾತ್ಮಿಕ ಚಿಂತೆಗೆ ಪರಿವರ್ತನೆಯಾದ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಮೊದಲಿಗೆ ಅತಿಥಿ ಅಭ್ಯಾಗತರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ನಂತರ ೬ನೇ ತರಗತಿಯ ಧಾತ್ರಿ ಕನಕದಾಸರ ಕೀರ್ತನೆಯನ್ನು ಹಾಡಿದರು. ವೇದಿಕೆಯಲ್ಲಿ ಪೂರ್ವಗುರುಕುಲ ಪ್ರಮುಖರಾದ ರೂಪಕಲಾ ಎಂ., ಹಿರಿಯ ಅಧ್ಯಾಪಕರಾದ ದೇವಿಕಾ ಪಿ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಪವನ್ ನಾಯಕ್ ನಿರೂಪಿಸಿ, ಶ್ರೀವತ್ಸ ಸ್ವಾಗತಿಸಿ, ಪೂರ್ವಜ್ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter