ಗಣಿತ-ವಿಜ್ಞಾನ ಮೇಳದಲ್ಲಿ ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕರಾಷ್ಟ್ರ ಮಟ್ಟದಲ್ಲಿ ಪ್ರಥಮ
ಕಲ್ಲಡ್ಕ: ವಿದ್ಯಾಭಾರತಿ ಅಖಿಲಾ ಭಾರತೀಯ ಶಿಕ್ಷಾ ಸಂಸ್ಥಾನ ವತಿಯಿಂದ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದರಾಷ್ಟ್ರ ಮಟ್ಟದ ಅಖಿಲಾ ಭಾರತೀಯ ಗಣಿತ-ವಿಜ್ಞಾನ ಮೇಳದಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿಯ ಮೋನಿಶಾ ಮತ್ತು ೬ನೇ ತರಗತಿಯ ಸಾನ್ವಿಕಾಮತ್, ಬೆಳಕು ಮತ್ತುಅದರ ಅನ್ವಯಿಕಗಳು ಎಂಬ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಇವರಿಗೆ ವಿದ್ಯಾಕೇಂದ್ರದ ಹಿರಿಯರು, ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯರು , ಅಧ್ಯಾಪಕ ವೃಂದದವರು, ಮಾತೃಭಾರತಿ ಸಮಿತಿ ಸದಸ್ಯರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಅಭಿನಂದಿಸಿದರು.
