ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇದರ “ವಿಕ್ರಂ ಸಾರಾಭಾಯಿ” ಎಂಬ ಹೆಸರಿನನೂತನ ವಿಜ್ಞಾನ ಪ್ರಯೋಗಾಲಯವನ್ನು ಮುಂಬೈನ ನಿದರ್ಶನ್ ಗೋವಾನಿ,ಡೈರೆಕ್ಟರ್‌ಆಫ್ ಪ್ರಾಪರ್ಟಿ ಮ್ಯಾನೇಜ್ಮೆಂಟ್‌ನ ಟ್ರಸ್ಟಿ ಹಾಗೂ ಕಮಲ ಅಂಕಿ ಬಾಯಿ ಗೋಮಂದಿರಂಗೋವಾನಿ ಟ್ರಸ್ಟ್ಇವರು ಸ್ವಯಂಚಾಲಿತ ಪರದೆಸರಿಸುವ ಬಟನ್‌ಒತ್ತುವುದರ ಮೂಲಕ ಉದ್ಘಾಟಿಸಿದರು.

ಶ್ರೀಮತಿ ಶಕುಂತಲಾ ಅಯ್ಯರ್‌ ಸುಭಿಕ್ಷ ಫಾರ್ಮರ್ಸ್ ಸೊಸೈಟಿ ಉಚ್ಚ ನ್ಯಾಯಾಲಯ ಇದರ ಸಿ.ಇ.ಓ ಇವರು ದೀಪ ಬೆಳಗಿಸಿ ಉದ್ಘಾಟನಾ ಸಮಾರಂಭಕ್ಕೆ ಶುಭಾಶಯಕೋರಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ರಮೇಶ್ ಗೋವಾನಿ ಮಾಲಕರು ಕಮಲ ಗ್ರೂಪ್ ಮುಂಬೈ ವಿವೇಕ ಮಿತ್ತಲ್‌ರಿಯಲ್‌ ಎಸ್ಟೇಟ್‌ ಉದ್ಯಮಿ ಮುಂಬೈ, ಪವನ್‌ ಚಂದ್ರ ಶೆಟ್ಟಿ ವಕೀಲರು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ, ವಿಶಾಲ ಸಾಲಿಯಾನ್‌ ಅಧ್ಯಕ್ಷರು ಸಣ್ಣ ಕೈಗಾರಿಕಾ ಉದ್ಯಮಿ ದಕ್ಷಿಣ ಕನ್ನಡ ಹಾಗೂ ಡಾ. ಪ್ರಭಾಕರ್ ಭಟ್‌ ಕಲ್ಲಡ್ಕ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರುಇದರ ಅಧ್ಯಕ್ಷರು, ವಿದ್ಯಾಕೇಂದ್ರದ ಸಂಚಾಲಕರು ವಸಂತ ಮಾಧವ, ಸಹ ಸಂಚಾಲಕರು ರಮೇಶ್‌ಎನ್, ಶೈಕ್ಷಣಿಕ ಪರಿವೀಕ್ಷಕರು ಲಕ್ಷ್ಮಿ ರಘುರಾಜ್, ಪ್ರೌಢಶಾಲಾ ಆಡಳಿತ ಅಧಿಕಾರಿ ಶಾಂಭವಿ, ಮುಖ್ಯೋಪಾಧ್ಯಾಯರು ಗೋಪಾಲ ಎಂ, ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರು, ಪೋಷಕರು, ಶಿಕ್ಷಕರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ತಾವೇತಯಾರಿಸಿದ ವೈಜ್ಞಾನಿಕ ಮಾದರಿಗಳ ಬಗ್ಗೆ ವಿವರಣೆ ನೀಡುವುದರ ಮೂಲಕ ಅತಿಥಿಗಳ ಮೆಚ್ಚುಗೆಯನ್ನು ಪಡೆದರು.ಅಂತಿಮವಾಗಿ ರಿಮೋಟ್ ಮೂಲಕ ವಿದ್ಯಾರ್ಥಿಗಳಿಂದ ತಯಾರಿಸಲ್ಪಟ್ಟ ಪಟಾಕಿರಾಕೆಟ್‌ನ್ನು ಅತಿಥಿಗಳು ಉಡಾಯಿಸಿದರು.

By suddi9

Leave a Reply

Your email address will not be published. Required fields are marked *