ಕೈಕಂಬ: ನೀರುಮಾರ್ಗ ಸಮೀಪದ ಭಟ್ರಕೋಡಿ ಎಂಬಲ್ಲಿ ಆಗಾಗ ಅಪಘಾತ ಸಂಭವಿಸುತ್ತಿದ್ದು ಇದಕ್ಕೆ ಸತ್ತುಹೋಗಿರುವ ಬ್ರಾಹ್ಮಣನೋರ್ವನ ಶಾಪವೇ ಕಾರಣ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. ಸದ್ಯ ಭಟ್ರಕೋಡಿ ಎಂಬಲ್ಲಿ ಇದೇ ವರ್ಷ ನಾಲ್ಕು ಅಪಘಾತ ಸಂಭವಿಸಿದ್ದು ಅದರಲ್ಲಿ ಮೂವರು ಅಸುನೀಗಿದ್ದಾರೆ. ಕಳೆದ ವರ್ಷವೂ ಇಲ್ಲಿ ಅನೇಕ ಅಪಘಾತ ಸಂಭವಿಸಿದ್ದು ಹಲವು ಜೀವಹರಣವೂ ನಡೆದಿದೆ.

ಭಟ್ರಕೋಡಿಯಲ್ಲಿ ಅಚಾನಕ್ ಬಂದ್ ಆಗುವ ವಾಹನ:
ಸ್ಥಳೀಯರು ಅಭಿಪ್ರಾಯ ಹಾಗೂ ಅನುಭವದ ಪ್ರಕಾರ ಭಟ್ರಕೋಡಿಯಲ್ಲಿ ರಾತ್ರಿ ಅಥವಾ ಹಗಲು ವೇಳೆ ವಾಹನಗಳು ಸಂಚರಿಸುತ್ತಿದ್ದಂತೆ ಅಚಾನಕ್ ಆಗಿ ಬಂದ್ ಆಗುತ್ತದೆ. ಹೀಗೆ ವಾಹನ ಬಂದ್ ಆಗುತ್ತಿದ್ದಂತೆ ವಾಹನ ಸವಾರನಿಗೆ ಕಣ್ಣು ಮಸುಕಾಗಲು ಆರಂಭವಾಗಿ ಎದುರಿನ ವಸ್ತುಗಳು ಕಾಣಿಸುವುದಿಲ್ಲ. ಹೀಗೆ ತನ್ನ ವಾಹನಗಳು ಅಪಘಾತಕ್ಕೆ ಕಾರಣವಾಗುತ್ತದೆ.
ಕಾರಣವಿಲ್ಲದೆ ಚಾಲಕರೊಳಗೆ ಗಲಾಟೆ:
ಸ್ಥಳೀಯರ ಇನ್ನೊಂದು ಅಭಪ್ರಾಯದ ಪ್ರಕಾರ ಇಲ್ಲಿ ಯಾವುದೋ ಒಂದು ಕೆಟ್ಟ ಶಕ್ತಿ ಚಾಲಕರೊಳಗಡೆಯೇ ಗಲಾಟೆ ಉಂಟಾಗುವಂತೆ ಮಾಡಿಸುತ್ತದೆ ಎಂದು ಸ್ಥಳೀಯರು ಅಭಿಪ್ರಾಯಿಸುತ್ತಾರೆ. ಅದರಂತೆಯೇ ಇಲ್ಲಿ ವಾಹನಗಳು ಬರುತ್ತಿದ್ದಂತೆ ಏನಾದರೊಂದು ಅಪಘಾತ ಸಂಭವಿಸುವಂತೆ ಭಾಸವಾಗಿ ಚಾಳಕರೊಳಗಡೆ ಗಲಾಟೆ ನಡೆಯುತ್ತದೆ. ಇದೇ ರೀತಿಯ ಗಲಾಟೆ ದಿನನಿತ್ಯವೆಂಬಂತೆ ನಡೆಯುವುದು ಸಾಮಾನ್ಯ.
ಗಣೇಶನ ಕಟ್ಟೆ ಒಡೆದುಹಾಕಿದ್ದಾರಂತೆ:
ಸ್ಥಳೀಯರ ಇನ್ನೊಂದು ಅಭಿಪ್ರಾಯದ ಪ್ರಕಾರ ಇಲ್ಲೊಂದು ಗಣೇಶನ ಕಟ್ಟೆ ಇದ್ದಿದ್ದು ಆ ಜಾಗವನ್ನು ಖಾಸಗಿ ವ್ಯಕ್ತಿಗಳು ಗುಳುಂ ಮಾಡಿದ್ದಾರಂತೆ. ಅದಕ್ಕೇ ಪೂರಕವಾಗಿರುವಂತೆ ಇಲ್ಲೊಂದು ನೂತನವಾಗಿ ಕಟ್ಟಡ ನಿಮರ್ಾಣವಾಗಿದ್ದು ಆ ಮನೆಯವರೇ ಫೋರ್ಜರಿಯಾಗಿ ಗಣೇಶನ ಕಟ್ಟೆ ಇದ್ದ ಜಾಗದಲ್ಲಿ ಮನೆಗೆ ಕಂಪೌಂಡ್ ನಿಮರ್ಿಸಿದ್ದಾರೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಕಟ್ಟಡ ಆರಂಭವಾಗಿ ಕೆಲವು ತಿಂಗಳ ನಂತರ ಈ ಕಟ್ಟಡಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕನೋರ್ವ ಕಟ್ಟಡದ ಮುಂದೆಯೇ ದಾರುಣವಾಗಿ ಮೃತಪಟ್ಟಿದ್ದ.
ಭಟ್ರಕೋಡಿಗೆ ಇನ್ನೆಷ್ಟು ಬಲಿ?
ಭಟ್ರಕೋಡಿಯಿಂದ ನೀರುಮಾರ್ಗಕ್ಕೆ ಸಾಗುವ ಬಲಬದಿಯಲ್ಲಿ ತಗಿಕೊಂಡಂತೆ ಇನ್ನೊಂದು ರಸ್ತೆ ಇದೆ. ಅಲ್ಲದೆ ಈದೇ ಸ್ಫಾಟ್ ಅಷ್ಟೊಂದು ಡೇಂಜರ್ ಆಗಿರದಿದ್ದರೂ ಇಲ್ಲಿ ಅನೇಕ ಅಪಘಾತಗಳು ಸಂಭವಿಸುತ್ತಲೇ ಇರುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಇನ್ನೂ ಎಚ್ಚರಗೊಳ್ಳದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೊನೇಪಕ್ಷ ಇಲ್ಲೊಂದು ಎಚ್ಚರಿಕಾ ಫಲಕವನ್ನಾದರೂ ಅಳವಡಿಸಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.
