ಸುದ್ದಿ9ಕೈಕಂಬ: ದೇಶದ 15ನೇ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರತಿಜ್ಞಾವಿಧಿ ಸ್ವೀಕರಿಸುತ್ತಿದ್ದಂತೆ ಕೈಕಂಬದಲ್ಲಿ ಆಸೀನರೂಢರಾಗಿದ್ದ ಮೋದಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮೋದಿ ಪದಗ್ರಹಣ ನಡೆಯುತ್ತಿದ್ದಂತೆ ಭಾವೋದ್ರೇಕಕ್ಕೊಳಗಾದ ಮೋದಿ ಅಭಿಮಾನಿಗಳು ಎದ್ದು ನಿಂತು ಸಲ್ಯೂಟ್ ಹೊಡೆಯುವ ಮೂಲಕ ಮೋದಿಗೆ ಅಭಿನಂದನೆ ಸಲ್ಲಿಸಿದರು.
ಪ್ರಧಾನ ಮಂತ್ರೀಕೀ ಜೈ ಎಂದು ಘೋಷಣೆ ಕೂಗಿದ ಮೋದಿ ಅಭಿಮಾನಿಗಳು ಮೋದಿ ಪ್ರತಿಜ್ಞಾವಿಧಿ ಸವೀಕರಿಸಿದ ಬಳಿಕ ನಾನಾ ನಮೂನೆಯ ಪಟಾಕಿ ಸಿಡಿಸಿದರು. ಕೈಕಂಬ ಜಂಕ್ಷನ್ನಲ್ಲಿ ಸುಮಾರು 100 ಮೀಟರ್ ಉದ್ದದ ಮಾಲೆಪಟಾಕಿ ಸಿಡಿಸಲಾಗಿದೆ. ಇದರ ಬಗ್ಗೆ ಪೂರ್ಣ ರೀತಿಯಲ್ಲಿ ಮುತುವಜರ್ಿ ವಹಿಸಿದ್ದ ಕೈಕಂಬದ ಬಸ್ ಸಮಯಪಾಲನ ಸಿಬ್ಬಂದಿ ಪಟಾಕಿಯನ್ನು ಸಾಕಷ್ಟು ಮುತುವಜರ್ಿ ವಹಿಸುವ ಮೂಲಕ ಸಿಡಿಸಲಾಯ್ತು.

10

11

12

13

14

15

16

17

18

1

2

3

4

5

6

7

8

_DSC9424

_DSC9431

_DSC9432

_DSC9434

_DSC9440

 

4

7

1

2

3

4

5

6
ಕೈಕಂಬದ ಗಣೇಶ್ ಕಟ್ಟೆಯಲ್ಲಿ ಹಾಕಲಾಗಿದ್ದ ಸ್ಕ್ರೀನ್ನಲ್ಲಿ ಮೋದಿ ಪ್ರಧಾನ ಮಂತ್ರಿಯಾಗುವ ಲೈವ್ ಅಪ್ಡೇಟ್ಸ್ ನೋಡಲು ಅವಕಾಶ ನೀಡಲಾಗಿತ್ತು. ನೆರೆದಿದ್ದ ಹಲವರು ಇದರ ಮೂಲಕವೇ ಸಮಾರಂಭವನ್ನು ನೋಡಿ ಆನಂದಿಸಿಕೊಂಡರು. ಒಟ್ಟಿನಲ್ಲಿ ಸಾವಿರಾರು ಜನರು ಆಗಮಿಸಿದ್ದರು.
ಮೋದಿ ಪ್ರಧಾನಿ ಆದ ನಂತರ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿತ್ತು. ಮೈಬಿಚ್ಚಿ ಹೆಜ್ಜೆ ಹಾಕಿದ ಮೋದಿ ಅಭಿಮಾನಿಗಳು ಕೈಕಂಬ ಜಂಕ್ಷನ್ಗೆ ನತರ್ಿಸುತ್ತಾ ಒಂದು ಸುತ್ತು ಹಾಕಿದರು. ಕೇಸರಿ ಧ್ವಜ ಹಾಗೂ ಬಿಜೆಪಿ ಧ್ವಜವೂ ಕಾರ್ಯಕರ್ತರ ಕೈಯ್ಯಲ್ಲಿ ರಾರಾಜಿಸುತ್ತಿತ್ತು. ಮೋದಿ ಪದಗ್ರಹಣ ನಡೆಯುತ್ತಿದ್ದಂತೆ ಕೈಕಂಬದಲ್ಲಿ ಅಘೋಷಿತ ಬಂದ್ ವಾತಾವರಣ ಸೃಷ್ಟಿಯಾಗಿತ್ತು. ಬಸ್ ವಾಹನಗಳು ತನ್ನ ಸಂಚಾರವನ್ನು ನಿಲ್ಲಿಸಿದವು. ಅಂಗಡಿಮುಂಗಟ್ಟುಗಳಿಂದ ಹೊರಕ್ಕೆ ಬಂದ ಮಾಲಕ ಹಾಗೂ ಇತರ ಸಿಬ್ಬಂದಿ ಮೋದಿ ಪ್ರಧಾನಿಯಾಗುವುದನ್ನು ಸ್ಕ್ರೀನ್ನಲ್ಲಿ ನೋಡಿ ಆನಂದಿಸಿದರು.
ಕಾರ್ಯಕ್ರಮವನ್ನು ನಮೋಬ್ರಿಗೇಡ್ ತಂಡ ಕೈಕಂಬ ಹಾಗೂ ಕೈಕಂಬದ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದರು

By Suddi9

Leave a Reply

Your email address will not be published. Required fields are marked *