ಬಂಟ್ವಾಳ; ಇಲ್ಲಿ ಕತ್ತಿಗಳು ನಡೆದಾಡುತ್ತವೆ, ಮರದ ತುಂಡುಗಳು ಓಡುತ್ತದೆ, ಟಾಚರ್್ ನೆಲದಲ್ಲಿ ಹರಿದಾಡುತ್ತದೆ.. ಇದನ್ನು ನೀವು ನಂಬುತ್ತೀರಾ.. ಇಲ್ಲ.. ಖಂಡಿತವಾಗಿಯೂ ಇದು ನಂಬುವವರಿಗೆ ಮಾತ್ರ.. ಯಾಕೆಂದರೆ ಇಂತಹಾ ಘಟನೆಗಳು ವೈಜ್ಞಾನಿಕ ಕಾಲಘಟ್ಟದಲ್ಲೂ ನಡೆಯುತ್ತಿದೆ ಎನ್ನುವುದೇ ವಿಜ್ಞಾನಕ್ಕೆ ದೊಡ್ಡ ಸವಾಲು.

ಹೌದು.. ಬಂಟ್ವಾಳ ತಾಲೂಕಿನ ಕೊಡ್ಮಾಣ್ ಗ್ರಾಮದ ಮನೆಯೊಂದರಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಕೆಲ ಘಟನೆಗಳು, ಮನೆಯವರನ್ನು ದಿಗ್ಬ್ರಮೆ ಗೊಳಿಸಿದೆ. ಈ ಮನೆಯೊಳಗೆ ನಡೆಯುವ ಕಲ್ಲು ಎಸೆತ, ಎಣ್ಣೆ ಇಲ್ಲದಿದ್ದರೂ ಹೊತ್ತಿ ಉರಿಯುವ ದೀಪ, ಮನೆಯೊಳಗೆ ಬಂದ ತುಳಸಿಕಟ್ಟೆಯ ಮಣ್ಣು, ಕತ್ತಿಗಳ ನಡೆದಾಟ ಮೊದಲಾದ ಘಟನೆಗಳ ಸುದ್ದಿಕೇಳಿ ಈಗ ಆ ಮನೆಗೆ ಜನಸಾಗರವೇ ಹರಿದು ಬರುತ್ತಿದೆ.
ಇಲ್ಲಿನ ನೆತ್ರಕರೆ ಎಂಬಲ್ಲಿನ ಕೂಸಪ್ಪ ಕುಲಾಲ್ ಹಾಗೂ ಮಹಾದೇವಿ ದಂಪತಿಯ ಮನೆಯಲ್ಲಿ ಈ ಘಟನಾವಳಿಗಳು ನಡೆಯುತ್ತಿದ್ದು, ಅಚ್ಚರಿಗೆ ಕಾರಣವಾಗಿದೆ. ಅನ್ನದ ಪಾತ್ರೆಯಲ್ಲಿ ಹುಳು, ಮನೆಯೊಳಗೆ ಕಲ್ಲೆಸೆತ, ಎಲ್ಲೋ ಇದ್ದ ಕಟ್ಟಿಗೆ ತುಂಡುಗಳು ಚಾವಡಿಗೆ ಬರುವುದು, ದಂಪತಿಯ ಮಗನ ಕಿವಿಯ ಆಭರಣ ಇದ್ದಕ್ಕಿಂದಂತೆ ಮಾಯವಾಗಿ ಮಾವಿನ ಹಣ್ಣಿನಲ್ಲಿ ಸೇರಿಕೊಳ್ಳುವುದು, ಚೀಲದಲ್ಲಿದ್ದ ಅಕ್ಕಿ ನೆಲಕ್ಕೆ, ಪಾತ್ರೆಯಲ್ಲಿಟ್ಟ ಬೂದಿ, ನೆಲಕ್ಕೆ ಚೆಲ್ಲುವುದು ಮೊದಲಾದ ಘಟನೆಗಳು ಕಳೆದ ಮೂರು ದಿನಗಳಿಂದ ನಡೆಯುತ್ತಿದೆ ಎಂದು ಭಯಗ್ರಸ್ತರಾಗಿಯೇ ಹೇಳುತ್ತಾರೆ.
ಕಳೆದ ಮೂರು ದಿನಗಳಿಂದ ಭಯದಿಂದಲೇ ರಾತ್ರಿ ಕಳೆದಂತಹ ಈ ದಂಪತಿ, ಇಂದು ಬೆಳಿಗ್ಗೆ ನೆರೆಕರೆಯವರಲ್ಲಿ ಹೇಳಿಕೊಂಡ ಬಳಿಕವಷ್ಟೇ ಈ ಘಟನೆ ಬೆಳಕಿಗೆ ಬಂದಿದೆ. ಬುಧವಾರ ಬೆಳಗಿನ ಇಲ್ಲಿ ಮನೆಯೊಳಗಿನ ಕತ್ತಿಗಳೆಲ್ಲಾ ಚಾವಡಿಯಲ್ಲಿ ಒಟ್ಟಾಗಿದೆ, ಅದೂ ನೇರವಾಗಿ ಗೋಡೆ ಒರಗಿ ನಿಂತಿತ್ತಂತೆ (ದೈವಾರಾಧನೆಯ ಪೀಠಕ್ಕೆ ಕತ್ತಿ ಒರಗಿಸಿಟ್ಟಂತೆ), ಕ್ಷಣಾರ್ಧದಲ್ಲಿ ಅನಾನಸು, ಮಾವಿನ ಹಣ್ಣು, ಚಿಕ್ಕ ಚಿಕ್ಕ ಪುಚ್ಚಳಗಳು, ಬೀಡಿಯ ನೂಲು, ಖಾಲಿ ಬಾಟಲಿಗಳು ಕಾಣಿಸಿಕೊಂಡವು ಎನ್ನುತ್ತಾರೆ ಮನೆಮಾಲಕಿ ಮಹಾದೇವಿಯವರು. ಎರಡು ದಿನದ ಹಿಂದೆಯಷ್ಟೇ ಪತ್ರಿಕೆಯೊಂದನ್ನು ಓದಲೆಂದು ಮನೆಮಾಲಕ ಕೂಸಪ್ಪ ಮೂಲ್ಯರು ಮನೆಯಲ್ಲಿ ತಂದಿರಿಸಿ, ಓದಲು ಸಿದ್ದತೆ ನಡೆಸಿದ್ದರಂತೆ, ಆ ಕ್ಷಣವೇ ಅವರ ಕನ್ನಡಕ ಒಡೆದುಹೋಯಿತು ಎಂದವರು ಒಡೆದುಹೋದ ಕನ್ನಡಕ ತೋರಿಸುತ್ತಾ ಹೇಳಿದರು.
ಈ ಅಚ್ಚರಿಯ ಸುದ್ದಿ ಕೇಳಿ ಬಂದವರ ಎದುರಿನಲ್ಲೇ ಚಿಕ್ಕ ಸೆಂಟ್ ಬಾಟಲಿ ಎಸೆತ, ಟಕ್ಕಿ ಚೆಲ್ಲುವುದು, ಬೂದಿ ಚೆಲ್ಲುವುದು ಮೊದಲಾದ ಘಟನೆಗಳು ನಡೆದಿವೆ






