ಸುದ್ದಿ9 ಕಿನ್ನಿಗೋಳಿ; ಆಧುನಿಕತೆಯ ಯಾಂತ್ರಿಕ ಯುಗದಲ್ಲಿ ಯುವ ಜನಾಂಗ ಸಂಸ್ಕಾರ, ಸಂಸ್ಕೃತಿ-ಆಚಾರ ವಿಚಾರಗಳಿಂದ ದೂರ ಸರಿಯುತ್ತಿದ್ದು , ಪ್ರಸಕ್ತ ಧರ್ಮ ಜಾಗೃತಿಯ ಕೆಲಸ ಹಿರಿಯರು ಮತ್ತು ಹೆತ್ತವರು ಅಗತ್ಯ ಮಾಡಬೇಕಾಗಿದೆ ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.

prathista vardhanthi
ಶನಿವಾರ ಎಳತ್ತೂರು ದೇವಳದ ವಿಪ್ರಸಂಪದ ಪ್ರತಿಷ್ಠಾನ ಪ್ರಾಯೋಜಕತ್ವದಲ್ಲಿ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನಗೈದು ಮಾತನಾಡಿದರು.
ಕರ್ನಾಟಕ ಬ್ಯಾಂಕ್ ಹಿರಿಯ ಮಹಾ ಪ್ರಬಂಧಕ ಜೈರಾಮ ಹಂದೆ ಅಧ್ಯಕ್ಷತೆ ವಹಿಸಿದ್ದರು.
ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ತಾಳಿಪಾಡಿ ವಿಪ್ರ ಸಂಪದ ಪ್ರತಿಷ್ಠಾನ ಅಧ್ಯಕ್ಷ ರಾಜಕುಮಾರ್ ಭಟ್, ಗೀರೀಶ್ ನಾವಡ ಉಪಸ್ಥಿತರಿದ್ದರು.
ಶ್ರೀನಿವಾಸಮೂರ್ತಿ ಭಟ್ ಸ್ವಾಗತಿಸಿ, ರಾಮಚಂದ್ರ ಉಡುಪ ವಂದಿಸಿದರು. ಶ್ರೀಧರ ಡಿ. ಎಸ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *