ಬಜಪೆ:ಪರಿಸರದ ಬಗ್ಗೆ ಎಲ್ಲರೂ ಮಾತನಾಡುವವರೇ ಆದರೆ ರಕ್ಷಣೆ ಮಾಡುವವರು ಯಾರು? ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ (ಏಕ ಬಳಕೆಯ ) ಯನ್ನು ಸರಕಾರ ನಿಷೇಧಿಸಿ ವರ್ಷಗಳು ಕಳೆದರೂ ಅದಿನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ ಬದಲಿಗೆ ಒಂದಲ್ಲ ಒಂದು ರೀತಿ ಪರಿಸರವನ್ನು ಪ್ಲಾಸ್ಟಿಕ್ ಆವರಿಸುತ್ತದೆ. ಎಂದು ಸುರತ್ಕಲ್ ಶಾಖೆಯ ಉಪ ವಲಯ ಅರಣ್ಯ ಅಧಿಕಾರಿ ಆಗಿರುವ ಶ್ರವಣ ಕುಮಾರ್ ನಲ್ವ ಹೇಳಿದರು.

ಅವರು ಬಜ್ಪೆ ಹೋಲಿ ಫ್ಯಾಮಿಲಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಸಂದರ್ಭ ವಿದ್ಯಾರ್ಥಿಗಳಿಗೆ ಉತ್ತಮ ಜಾತಿಯ 15 ಗಿಡಗಳನ್ನು ವಿತರಣೆ ಮಾಡಿ ಶಾಲಾ ಪರಿಸರದಲ್ಲಿ ಐದು ಗಿಡಗಳನ್ನು ನೆಡುವುದರ ಮುಖೇನ ಪರಿಸರ ಜಾಗೃತಿಯ ಕಾರ್ಯಕ್ರಮವನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಮಾತನಾಡಿದರು.

ಅದೇ ರೀತಿ ಜನರು ಪ್ಲಾಸ್ಟಿಕ್ ನ ಅಪಾಯ ತಿಳಿದಿದ್ದರೂ ಬಳಸುತ್ತಿದ್ದಾರೆ. ನಮ್ಮ ಎದುರು ಪ್ಲಾಸ್ಟಿಕ್ ಗೆ ಹಲವು ಪರ್ಯಾಯಗಳಿವೆ. ಅದರ ಬಳಕೆಗೆ ಮನಸ್ಸು ಮಾಡಬೇಕಾಗಿದೆ ಪ್ಲಾಸ್ಟಿಕ್ ಬಳಸುವುದನ್ನು ಕಡಿಮೆ ಮಾಡಿ ನಮ್ಮ ಪರಿಸರದಲ್ಲಿ ಗಿಡಮರಗಳನ್ನು ನೆಟ್ಟು ಸ್ವಚ್ಛ ಸುಂದರ ವಾತಾವರಣದ ಪರಿಸರವನ್ನು ನಾವೆಲ್ಲ ಪಡೆಯೋಣ ಎಂದರು.

ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯನಿ ವಂದನೀಯ/ ಭಗಿನಿ / ಜೆಸ್ಸಿ ಪ್ರೀಮಾ ರವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಗೆ ಜಾಗೃತಿ ಮೂಡಿಸುವ ವಿಶೇಷ ಕಾಳಜಿಯ ಮಾತನ್ನಾಡಿ ಪರಿಸರ ರಕ್ಷಣೆಯ ಜೊತೆಗೆ ಪರಿಸರದ ಜಲಮೂಲಗಳನ್ನು ಸಂರಕ್ಷಣೆ ಮಾಡುವುದು ಅತ್ಯಗತ್ಯ ಪ್ಲಾಸ್ಟಿಕ್ ನ ಬಳಕೆ ಕಡಿಮೆ ಮಾಡಿ ಪ್ಲಾಸ್ಟಿಕ್ ನ ಬದಲಿಗೆ ಪರ್ಯಾಯ ವಸ್ತುಗಳನ್ನು ಬಳಸಿ ಈ ಪರಿಸರದಲ್ಲಿ ಸ್ವಚ್ಛ ಸುಂದರ ಪರಿಸರವನ್ನು ನಿರ್ಮಿಸೋಣ ಎಂದು ಕರೆ ನೀಡಿದರು.


ವೇದಿಕೆಯಲ್ಲಿ ಬಜಪೆಯ ಗಸ್ತು ಅರಣ್ಯ ಪಾಲಕರಾದ ಸಿದ್ದಣ್ಣ ದೊಡ್ಡಮನಿ ಯವರು ಉಪಸ್ಥಿತರಿದ್ದರು ಈ ಸಂದರ್ಭ ಶಾಲಾ ವಿದ್ಯಾರ್ಥಿಗಳಿಂದ ಪರಿಸರ ಗೀತೆಯ ಪ್ರಸ್ತುತಪಡಿಸುವ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂತು ಶಾಲೆಯ ಮಕ್ಕಳಿಗೆ ಸಂಪಿಗೆ , ಹಲಸು, ಮಾವು ಪುನರ್ಪುಳಿ, ರೇಂಜ ಉತ್ತಮ ಜಾತಿಯ ಹಣ್ಣು ಹಂಪಲಿನ ಗಿಡಗಳನ್ನು ವಿತರಿಸಿ ಮಕ್ಕಳ ಮನೆಯಲ್ಲಿ ಅವರ ತಂದೆ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಪ್ರತಿಜ್ಞೆಯನ್ನು ಮಾಡಿಸಿ ವಿದ್ಯಾರ್ಥಿಗಳು ಮನೆಯಲ್ಲಿ ಅವರವರ ತಂದೆ ತಾಯಿಯ ಹೆಸರಿನಲ್ಲಿ ಗಿಡ ನೆಟ್ಟು ಘೋಷಣೆ ಮಾಡುವಂತೆ ಜಾಗೃತಿ ಮೂಡಿಸಲಾಯಿತು.


ಪರಿಸರ ಸಂಘದ ಸಂಚಾಲಕರಾದ ಶಿಕ್ಷಕ ವಾಸುದೇವ ರಾವ್ ಕುಡುಪು ಶಿಕ್ಷಕರಾದ ಶ್ರೀ ಪ್ರಶಾಂತ್ ಶ್ರೀಮತಿ ಲಿಲ್ಲಿ ಮೆನೇಜಸ್ ಶ್ರೀಮತಿ ಯಶೋಧ ಶ್ರೀಮತಿ ಶ್ರೀಧನ್ಯ ಶ್ರೀಮತಿ ಗೀತಾಂಬ ಶ್ರೀ ಜ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಪರಿಸರ ಸಂಘದ ಕಾರ್ಯದರ್ಶಿ ಪ್ರಿಯಾಂಕ ಸ್ವಾಗತಿಸಿದರು ಕುಮಾರಿ ತಾಸ್ನೀಯ ವಂದಿಸಿದರು ಕುಮಾರಿ ತಸ್ಮೀಯ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *